ಅಕ್ರಮ ಗೋ ಸಾಗಾಟ ಪತ್ತೆ ವಾಹನ ಸಹಿತ ಮೂವರ ವಶ

ಶೇರ್ ಮಾಡಿ

ನೇಸರ ಆ.18: ಅಕ್ರಮವಾಗಿ ಗೋ ಸಾಗಾಟದಲ್ಲಿ ತೊಡಗಿದ್ದ ವಾಹನ ಹಾಗೂ ಮೂವರನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ನಡಗ್ರಾಮದ ಮಂಜೊಟ್ಟಿ ಅಂತ್ರಾಯಪಲ್ಕೆ ಎಂಬಲ್ಲಿ ಆ.18ರ ಮುಂಜಾನೆ ನಡೆದಿದೆ.

ಪೊಲೀಸರು ಮಾರುತಿ 800 ಕಾರನ್ನು ತಪಾಸಣೆಗೆ ತಡೆದು ನಿಲ್ಲಿಸಿದಾಗ ಅದರ ಚಾಲಕ ರವೂಫ್ ಎಂಬಾತ ಓಡಿ ಪರಾರಿಯಾಗಿದ್ದಾನೆ. ಕಾರಿನ ಹಿಂದುಗಡೆ ಬರುತ್ತಿದ್ದ ಕ್ವಾಲಿಸ್ ವಾಹನವನ್ನು ತಪಾಸಣೆ ನಡೆಸಿದಾಗ ಎರಡು ದನ ಹಾಗೂ ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿ ತುಂಬಿಸಿರುವುದು ಕಂಡುಬಂದಿದೆ.
ಕ್ವಾಲಿಸ್ ವಾಹನದಲ್ಲಿದ್ದ ಆರೋಪಿಗಳಾದ ರಫೀಕ್, ರಜಾಕ್ ಪಿ. ಹಾಗೂ ನಾಗೇಶ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ ಐ ನಂದಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಎರಡು ವಾಹನ ಹಾಗೂ ಜಾನುವಾರು ಸಹಿತ ಒಟ್ಟು 4.15 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

error: Content is protected !!