ನೇಸರ ಆ.19: ವಿಕ್ರಂ ಯುವಕ ಮಂಡಲ (ರಿ) ಕಾಂಚನ ಇದರ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ‘ರಜತ ಮಹೋತ್ಸವ’ ಕಾರ್ಯಕ್ರಮ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಿತು. ಭಜನೆ, ಪುಟಾಣಿ ಮಕ್ಕಳಿಗೆ ಕೃಷ್ಣ ವೇಷ, ಬಾಲಕ ಮತ್ತು ಬಾಲಕಿಯರಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಯುವಕ ಮಂಡಲದ ಪೂರ್ವಾಧ್ಯಕ್ಷರುಗಳಿಗೆ ಗೌರವಾರ್ಪಣೆ, ಪ್ರಖ್ಯಾತ ವಿಠಲ್ ನಾಯಕ್ ಕಲ್ಲಡ್ಕ ಬಳಗದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳಿಗೆ ವಿಕ್ರಂ ಯುವಕ ಮಂಡಲ ಕಾಂಚನ ಸಾಕ್ಷಿಯಾಯಿತು.
NESARA|| WhatsApp ||GROUPS |
---|
ನಡ್ಪ ವಿಷ್ಣುಮೂರ್ತಿ ಭಜನಾ ಸಂಘದ ಸದಸ್ಯರ ಭಜನೆಯೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಾರಂಭವಾಯಿತು. ನಂತರ ಪುಟಾಣಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ, ವಿವಿಧ ವಯೋಮಾನದ ಪುರುಷ, ಮಹಿಳೆಯರಿಗೆ, ಬಾಲಕ ಬಾಲಕಿಯರಿಗೆ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಾದ ಕೃಷ್ಣನ ಹಾಡು, ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ, ಅಡ್ಡ ಜಾರುಕಂಬದಲ್ಲಿ ನಡೆಯುವುದು, ತ್ರೋಬಾಲ್, ವಾಲಿಬಾಲ್, ಹಗ್ಗ ಜಗ್ಗಾಟ, ಕಬಡ್ಡಿ, ಅದೃಷ್ಟ ಆಟ, ನಡೆಯಿತು.
ಸುಬ್ರಹ್ಮಣ್ಯ ಪ್ರಸಾದ್ ಅಗರ್ತಿಮಾರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸಭಾ ಅಧ್ಯಕ್ಷೆ ಯನ್ನು ವಿಕ್ರಂ ಯುವಕ ಮಂಡಲದ ಪೂರ್ವಾಧ್ಯಕ್ಷ ಡೆನ್ನಿಸ್ ಪಿಂಟೊ ಪುಯಿಲ ವಹಿಸಿದ್ದರು. ವೇದಿಕೆಯಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸ್ಮಿತಾ ಧನಂಜಯ ಪುಯಿಲ, ರವೀಂದ್ರ ಭಟ್ ಕಲ್ಲಕಟ್ಟ, ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಮುಖ್ಯ ಗುರು ಸೂರ್ಯ ಪ್ರಕಾಶ ಉಡುಪ, ಲಕ್ಷ್ಮೀ ನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಲಕ್ಷಣ್ ಗೌಡ, ಮುಕುಂದ ಗೌಡ ನಡ್ಪ ಮಾಜಿ ಸದಸ್ಯರು ತಾಲೂಕು ಪಂಚಾಯತ್ ಪುತ್ತೂರು, ಉಮೇಶ್ ನೆಕ್ಕರೆ, ಗೌರವಾಧ್ಯಕ್ಷರು ವಿಕ್ರಂ ಯುವಕ ಮಂಡಲ ಕಾಂಚನ ಉಪಸ್ಥಿತರಿದ್ದರು. ಸ್ಥಳೀಯ ಕಾಂಚನ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ಭಟ್, ಹರ್ಷ ಕುಮಾರ್,
ನಿವೃತ್ತ ಶಿಕ್ಷಕರಾದ ಸುಬ್ರಹ್ಮಣ್ಯ ಉಪಾಧ್ಯಾಯ, ಕೃಷ್ಣಪ್ಪ ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷಗಳಾದ ಮೋನಪ್ಪ ಪೂಜಾರಿ ಡೆಂಬಲೆ, ರಾಮಣ್ಣ ಗೌಡ ಪುಯಿಲ, ವೆಂಕಟ್ರಮಣ ಗೌಡ ಅಗರ್ತಿಮಾರು, ಎಂ. ಎಸ್.ಪ್ರಸಾದ್, ವೀರಸ್ವಾಮಿ ಕಾಂಚನ, ಕುಶಾಲಪ್ಪ ಗೌಡ, ಅನಿಲ್ ಪಿಂಟೊ ಪುಯಿಲ ಇವರಿಗೆ ಗೌರವಾರ್ಪಣೆ ನಡೆಯಿತು.
ವಿಠಲ್ ನಾಯಕ್ ಕಲ್ಲಡ್ಕ ಬಳಗ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ಧನಂಜಯ ಪುಯಿಲ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಿಕ್ರಂ ಯುವಕ ಮಂಡಲ ಅಧ್ಯಕ್ಷ
ಅನಿಲ್ ಪಿಂಟೊ ಪುಯಿಲ ಧನ್ಯವಾದ ಅರ್ಪಿಸಿದರು. ಶ್ರೀರಾಂ ಅಗರ್ತಿಮಾರು ಪ್ರಾರ್ಥಿಸಿದರು .ಉಪನ್ಯಾಸಕ ಜೇಸಿ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ರಜತ ಮಹೋತ್ಸವದ ಅದ್ದೂರಿ ವೇದಿಕೆಯನ್ನು ಸ್ಥಳೀಯ “ವಿಷ್ಣು” ಡೆಕೋರೇಶನ್ ಮಾಲಕ ದಿನೇಶ್ ನಡ್ಪ ಸೇವಾ ರೂಪದಲ್ಲಿ ನೀಡಿ ಸಹಕರಿಸಿದರು. ಸಚಿನ್ ಮುದ್ಯ , ಉಮೇಶ್, ಯಾದವ ನೆಕ್ಕರೆ, ಗಿರಿಯಪ್ಪ,ನೇಮಣ್ಣ,
ಬಾಲಕೃಷ್ಣ ನಾಯಿಲ, ತ್ಯಾಗರಾಜ ,ಜಯರಾಮ, ಚಂದ್ರಶೇಖರ್, ಪ್ರಮೋದ್, ಮೋಹನ್, ಯತೀಶ್, ಗಿರೀಶ್, ಮನೋಜ್, ಶಿವಪ್ರಸಾದ್, ರಾಮಚಂದ್ರ, ಹೇಮಂತ್, ನವೀನ್, ಕಾಂಚನ ಲೈಟ್ಸ್ ಮತ್ತು ಸೌಂಡ್ಸ್ ಮಾಲಕ ಹರೀಶ್ ಮತ್ತು ಚರಣ್ ಶಾಮಿಯಾನ ಮಾಲಕ ರುಕ್ಮಯ ಸಹಕರಿಸಿದರು. ಸ್ಥಳೀಯರಾದ ಬಾಬುಗೌಡ, ಹೊನ್ನಪ್ಪ ಗೌಡ, ಬಾಲಕೃಷ್ಣ ಗೌಡ, ಕೃಷ್ಣಪ್ಪಗೌಡ, ದಿನೇಶ್, ಯತೀಶ್, ರಾಜೇಶ್, ಶ್ರೀನಿವಾಸ, ದಯಾನಂದ, ಎಲ್ಯಣ್ಣ, ಪ್ರವೀಣ್, ಮೋನಪ್ಪ ಪುಯಿಲ ಸಾರ್ವಜನಿಕ ವಿಶೇಷ ಭೋಜನ ವ್ಯವಸ್ಥೆಯಲ್ಲಿ ಸಹಕರಿಸಿದರು. ಸ್ಥಳೀಯ ಸಂಸ್ಥೆಯ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.