ಆಧುನಿಕ ಕಥನ ಸಾಹಿತ್ಯ ಅಧ್ಯಯನ ಶಿಬಿರ ಉದ್ಘಾಟನೆ

ಶೇರ್ ಮಾಡಿ

ನೇಸರ ಆ.19: ನೀರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು,ಅದರ ಉಗ್ರ ಹಾಗೂ ಸೌಮ್ಯ ರೂಪಗಳನ್ನು ನಾವು ಕಾಣುತ್ತಿದ್ದೇವೆ. ಸಾಹಿತ್ಯದ ವಿಚಾರದಲ್ಲೂ ನೀರು ಕೇಂದ್ರಬಿಂದುವಾಗಿದ್ದು ಈ ಬಾರಿಯ ಶಿಬಿರದಲ್ಲಿ ಜಲಮೂಲ ಗಳನ್ನು ಪ್ರಮುಖ ಅಂಶವಾಗಿ ಪರಿಗಣಿಸಿ ಅಧ್ಯಯನ ನಡೆಯಲಿದೆ ಎಂದು ಖ್ಯಾತ ವಿಮರ್ಶಕ ಸಾಗರದ ಪ್ರೊ.ಟಿ.ಪಿ. ಅಶೋಕ ಹೇಳಿದರು.
ಅವರು ಉಜಿರೆ ಎಸ್. ಡಿ.ಎಂ.ಸ್ವಾಯತ್ತ ಕಾಲೇಜಿನ ಕನ್ನಡ ಸಂಘ ಹಾಗೂ ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಆಧುನಿಕ ಕಥನ ಸಾಹಿತ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

NESARA|| WhatsApp ||GROUPS

   
                          

 

  
                                                     

 

ಸೂಕ್ಷ್ಮಗಳನ್ನು ಆಸ್ವಾಧಿಸುವ ಭಾವದೊಂದಿಗೆ ವೈವಿಧ್ಯಮಯ ಚಟುವಟಿಕೆ,ನಿರಂತರ ಭಾಗವಹಿಸುವಿಕೆಯಿಂದ ಶಿಬಿರಗಳು ಪೂರ್ಣತೆ ಪಡೆಯುತ್ತವೆ ಎಂದರು.
ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ ಜೀವಂತಿಕೆಯ ಬದುಕಿಗೆ ಅಧ್ಯಯನ ಸಂಸ್ಕೃತಿ ಪ್ರಾಮುಖ್ಯವಾಗಿದೆ. ವೃತ್ತಿ ಜೀವನದ ಅಧ್ಯಯನದೊಂದಿಗೆ ಸಾಹಿತ್ಯ,ಕಲೆಗಳ ಆಸಕ್ತಿಯನ್ನು ಒಗ್ಗೂಡಿಸಿಕೊಳ್ಳಬೇಕು. ಯೋಜನಾ ಬದ್ಧ ಕಾರ್ಯಕ್ರಮಗಳು ಉತ್ತಮ ಉದ್ದೇಶ ಹಾಗೂ ಫಲಿತಾಂಶವನ್ನು ನೀಡುತ್ತವೆ. ಇವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಯೋಜನ ಪಡೆಯಬೇಕು ಎಂದರು.
ಪ್ರಿನ್ಸಿಪಾಲ್ ಪಿ.ಎನ್. ಉದಯಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್,ಪಿಜಿ ಡೀನ್ ಡಾ.ಪಿ.ವಿಶ್ವನಾಥ್, ಸಂಯೋಜಕಿ ಡಾ.ಬೋಜಮ್ಮ ಕೆ.ಎನ್. ಉಪಸ್ಥಿತಿರಿದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ.ಸಂಪತ್ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಪದಾಧಿಕಾರಿ ದಶಮಿ ವಂದಿಸಿದರು.

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುವ ಉದ್ದೇಶದಿಂದ ನಡೆಯುತ್ತಿರುವ 24ನೇ ವರ್ಷದ ಈ ಮಾಹಿತಿ ಕಾರ್ಯಾಗಾರವು ಆ. 19 ಹಾಗೂ 20ರಂದು ನಡೆಯಲಿದೆ. ಸಾಗರದ ಪ್ರೊ.ಜಶ್ವಂತ್ ಜಾಧವ್, ಪ್ರೊ.ಎಚ್. ಎಂ. ಶಿವಾನಂದ, ಡಾ.ಮಾಧವ ಚಿಪ್ಪಳ್ಳಿ, ಕಥೆಗಾರ ಕುಮಟಾದ ಪ್ರೊ. ಶ್ರೀಧರ ಬಳಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು ಸಂವಾದ,ಸಾಕ್ಷ ಚಿತ್ರ, ಚಲನಚಿತ್ರ ಇತ್ಯಾದಿಗಳ ವಿಶ್ಲೇಷಣೆ ಮೂಲಕ ಅಧ್ಯಯನ ಶಿಬಿರ ಜರಗಲಿದೆ.

Leave a Reply

error: Content is protected !!