ನೇಸರ ನ.29: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ),ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ವರ್ಗಾವಣೆಗೆ ಸಂಬಂಧಿಸಿದಂತೆ ಈ ದಿನ ನಡೆದ ವರ್ಗಾವಣೆಯಲ್ಲಿ 25% ಕ್ಕಿಂತ ಹೆಚ್ಚು ಖಾಲಿ ಹುದ್ದೆ ಹೊಂದಿರುವ ತಾಲೂಕುಗಳ ಶಿಕ್ಷಕರಿಗೆ ತಾಲೂಕು ಒಳಗೆ ಮತ್ತು ತಾಲೂಕಿನಿಂದ ಹೊರಗೆ ವರ್ಗಾವಣೆ ನೀಡದೆ ಇರುವ ಕುರಿತು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಮತ್ತು ಮುಂದಿನ ವರ್ಗಾವಣೆಯಲ್ಲಿ ಸೂಕ್ತ ತಿದ್ದುಪಡಿ ಮಾಡಿ ಎಲ್ಲಾ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ನೀಡುವಂತೆ ಮಾನ್ಯ ಉಪನಿರ್ದೇಶಕರ ಮೂಲಕ ಮಾನ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಈಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಮಲ್ ನೆಲ್ಯಾಡಿ,ಉಪಾಧ್ಯಕ್ಷ ನವೀನ್ ,ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ, ಜಿಲ್ಲಾ ಪದಾಧಿಕಾರಿ ಅಮಿತಾನಂದ ಹೆಗ್ಡೆ, ಪುತ್ತೂರು ಅಧ್ಯಕ್ಷ ಲಕ್ಷ್ಮಣ ನಾಯಕ,ಕಾರ್ಯದರ್ಶಿ ವೇದಾವತಿ,ಮಂಗಳೂರು ದಕ್ಷಿಣದ ಅಧ್ಯಕ್ಷ ಜಗದೀಶ್ ಶೆಟ್ಟಿ,ಕಾರ್ಯದರ್ಶಿ ರಾಧಾಕೃಷ್ಣ ರಾವ್,ಮಂಗಳೂರು ಉತ್ತರದ ಅಧ್ಯಕ್ಷ ಜಯರಾಮ ಕಾರ್ಯದರ್ಶಿ ರೀಟಾ ಫರ್ನಾಂಡಿಸ್,ಕಡಬ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ,ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಸುರೇಶ್ ಮಾಚರ್,ಸುಳ್ಯ ತಾಲೂಕು ಅಧ್ಯಕ್ಷ ಶ್ರೀಧರ್ ಕಾರ್ಯದರ್ಶಿ ಪದ್ಮನಾಭ್ ,ರಾಜ್ಯ ಸಂಘಟನಾ ಕಾರ್ಯದರ್ಶಿ ಹೇಮಲತಾ ಮತ್ತು ವಿವಿಧ ತಾಲೂಕು ಪದಾಧಿಕಾರಿಗಳು ಮತ್ತು ಶಿಕ್ಷಕರು ಹಾಜರಿದ್ದರು.