ಶ್ರೀ ಜನಾರ್ದನ ಕೃಪಾಶ್ರಿತ ಚಿಕ್ಕಮೇಳ ಉಜಿರೆ,ಯಕ್ಷಗಾನ ಪ್ರದರ್ಶನ: ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ

ಶೇರ್ ಮಾಡಿ

ನೇಸರ ನ30: ಯಕ್ಷಗಾನ ಕಲಾವಿದರಿಗೆ ಆರು ತಿಂಗಳು ಮೇಳದ ತಿರುಗಾಟ ನಡೆದರೆ ಉಳಿದಂತೆ ಆರು ತಿಂಗಳು ಜೀವನೋಪಾಯಕ್ಕೆ ಇತರ ವ್ಯವಹಾರಗಳೇ ಆಶ್ರಯ ವಾಗುತ್ತವೆ ಆದರೆ ಕಲೆಯ ತುಡಿತವುಳ್ಳ ಕೆಲ ಕಲಾವಿದರು ಇತ್ತೀಚೆಗೆ ಚಿಕ್ಕಮೇಳ ಕಟ್ಟಿಕೊಂಡು ಕಲೋಪಾಸನೆ ಮಾಡುತ್ತಾರೆ ಆದರೂ ಅಪರೂಪವೆನಿಸುವ ಈ ರೀತಿ ಚಿಕ್ಕ ಮೇಳವನ್ನು ಕಟ್ಟಿಕೊಂಡು ಕಳೆದ ಆರು ವರುಷಗಳಿಂದ ತಿರುಗಾಟ ನಡೆಸುತ್ತಿದೆ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ಶ್ರೀ ಜನಾರ್ದನ ಕೃಪಾಶ್ರಿತ ಚಿಕ್ಕಮೇಳ ಉಜಿರೆ. ಭಾಗವತರಾದ ಮೋಹನ ಶಿಶಿಲ ರವರ ಸಂಯೋಜನೆಯಲ್ಲಿ ಆರು ತಿಂಗಳ ಪರ್ಯಂತ ದಕ್ಷಿಣಕನ್ನಡದ್ಯಾದ್ಯಂತ ತಿರುಗಾಟ ನಡೆಸಿದ ಚಿಕ್ಕಮೇಳದ ಕೊನೆಯ ಪ್ರದರ್ಶನ ದಿನಾಂಕ 26-11 -2021 ರಂದು ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಸೇವೆ ನಡೆಸುವುದರೊಂದಿಗೆ ನಡೆಯಿತು.ಪ್ರದರ್ಶನದಲ್ಲಿ ಪ್ರಸಿದ್ಧ ಕಲಾವಿದರಾದ ಕಟೀಲು ಮೇಳದ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮೋಹನ ಅಮ್ಮುಂಜೆ,ದೇವರಾಜ ಆಚಾರ್ಯ ಸುಂದರ ಬಂಗಾಡಿ ಮೊದಲಾದವರು ಭಾಗವಹಿಸಿದ್ದರು.


ಸೌತಡ್ಕ ಶ್ರೀ ಗಣೇಶ ಕಲಾಮಂದಿರದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಕೃಷ್ಣಭಟ್ ಹಿತ್ತಿಲು ರವರು ದೀಪ ಬೆಳಗಿಸಿ ಶುಭ ಹಾರೈಸಿದದರು, ವೇದಿಕೆಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಾವಡಪ್ಪ ದೊಡ್ಡಮನಿ, ಹರೀಶ್ ಮುಂಡ್ರುಪಾಡಿ, ಪುರಂದರ ಕಡಿರ, ಆನಂದ ಪಡ್ರೆ ಮೊದಲಾದವರು ಮಾತನಾಡಿ ಮೇಳಕ್ಕೆ ಶುಭವನ್ನು ಹಾರೈಸಿದರು.
ಮೇಳದ ಸಂಚಾಲಕ ಮೋಹನ ಶಿಶಲ ಮೇಳದ ಬಗ್ಗೆ ಮಾಹಿತಿ ನೀಡಿ ಚಿಕ್ಕಮೇಳ ಕಳೆದ ಆರು ತಿಂಗಳ ತಿಂಗಳುಗಳಿಂದ ಸುಮಾರು ಇನ್ನೂರ ಮೂವತ್ತಕ್ಕೂ ಮಿಕ್ಕಿ ಪ್ರಸಂಗಗಳನ್ನು ಪ್ರದರ್ಶಿಸಿ ಮನೆ-ಮನಗಳಲ್ಲಿ ಕಲೆಯನ್ನು, ಸಂಸ್ಕೃತಿಯನ್ನು ಪಸರಿಸುವ ಕಾಯಕ ಮಾಡಿದೆ ಎಂದರು.

ಮೇಳದ ತಿರುಗಾಟದ ಅವಧಿಯಲ್ಲಿ ಸಹಕರಿಸಿದ ಕಲಾವಿದರಾದ ರಾಘವೇಂದ್ರ ಪೇತ್ರಿ ಸತೀಶ,ಆನಂದ ಪಡ್ರೆ, ಚಿದಾನಂದಗೌಡ, ಶಿವಾನಂದ ಪೆರ್ಲ, ಪ್ರಜ್ವಲ್ ಗುರುವಾಯನಕೆರೆ, ಉಮೇಶ್ ಕಟೀಲ್, ಶರತ್ ಶೆಟ್ಟಿ, ಲೋಕೇಶ್ ಸೌತಡ್ಕ, ಗಣೇಶ ಸೌತಡ್ಕ ರವರನ್ನು ಗೌರವಿಸಲಾಯಿತು. ರಾಘವೇಂದ್ರ ಪೇತ್ರಿ ಸ್ವಾಗತಿಸಿ, ಸುಧೀರ್ ಕುಮಾರ್ ನೆಲ್ಯಾಡಿ ನಿರೂಪಿಸಿದರು.

Leave a Reply

error: Content is protected !!