ನೇಸರ ನ 30 :ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಕಾಡಾನೆಗಳ ದಾಳಿ ನಿರಂತರ ನಡೆಯುತ್ತಲೇ ಇದೆ, ಇದೀಗ ಹಾಡುಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಕಿತ್ತು ತಿಂದಿದೆ.
ಸೋಮವಾರ ಸಂಜೆ ಸಿರಿಬಾಗಿಲಿನ ಬಾರ್ಯ ಎಂಬ ಪ್ರದೇಶಕ್ಕೆ ಗರ್ಭಿಣಿ ಆನೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಆನೆಯನ್ನು ಓಡಿಸುವ ಸಲುವಾಗಿ ಪಟಾಕಿ ಸಿಡಿಸಿದರೂ ತೋಟದಿಂದ ಹೋಗಿಲ್ಲ ಎಂದು ಕೃಷಿಕರು ವಿವರಿಸಿದ್ದಾರೆ.
ತೋಟಕ್ಕೆ ಬಂದಿರುವ ಆನೆಯ ಚಿತ್ರವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಜನಾರ್ಧನ ಬಾರ್ಯ,ಬಾಲಕೃಷ್ಣ ಗೌಡ, ಐತಪ್ಪ ಗೌಡ,ದೇವರಾಜ ಗೌಡ ,ಅಣ್ಣಪ್ಪ ಗೌಡ ಎಂಬವರ ತೋಟಕ್ಕೆ ಕಾಡನೆ ನುಗ್ಗಿದೆ ಎಂದು ತಿಳಿದು ಬಂದಿದೆ.
ಈ ಭಾಗದಲ್ಲಿ ಕೃಷಿ ತೋಟಗಳಿಗೆ ನಿರಂತರ ಆನೆ ಹಾಗೂ ಇನ್ನಿತರ ಕಾಡು ಪ್ರಾಣಿ ದಾಳಿ ಮಾಡುತ್ತಿದ್ದು ಕೂಡಲೇ ಕೃಷಿಕರ ರಕ್ಷಣೆ ಮಾಡಿ ಸೂಕ್ತ ಪರಿಹಾರ ಹಾಗೂ ಶಾಶ್ವತ ತಡೆಗೋಡೆ ವ್ಯವಸ್ಥೆ ಸಂಬಂಧಪಟ್ಟವರು ಮಾಡುವಂತೆ ಕೃಷಿಕರು ಒತ್ತಾಯ ಕೇಳಿಬಂದಿದೆ.