ಪಿಯು ಉಪನ್ಯಾಸಕರ ಹುದ್ದೆಗೆ ಅರ್ಹತೆ, ವಯಸ್ಸು, ವೇತನ, ಪರೀಕ್ಷೆ ಮಾದರಿ, ಅರ್ಜಿ ಶುಲ್ಕ, ಇತರೆ ಮಾಹಿತಿ ಇಲ್ಲಿದೆ..

ಶೇರ್ ಮಾಡಿ

ನೇಸರ ಆ.26: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧೀನದ ಪಿಯು ಕಾಲೇಜುಗಳ ಉಪನ್ಯಾಸಕ ಹುದ್ದೆಗೆ ವಿದ್ಯಾರ್ಹತೆ ಏನು, ವಯೋಮಿತಿ ಅರ್ಹತೆಗಳೇನು, ಅರ್ಜಿ ಶುಲ್ಕ ಎಷ್ಟು, ಮಾಸಿಕ ವೇತನ ಎಷ್ಟಿರುತ್ತದೆ, ಪರೀಕ್ಷೆ ಮಾದರಿ ಹೇಗಿರುತ್ತದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕರ ಒಟ್ಟು 778 ಹುದ್ದೆಗಳಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಬಿಡುಗಡೆ ಆಗಲಿದೆ. ಆದ್ದರಿಂದ ಈ ಕೆಳಗಿನ ಮಾಹಿತಿಗಳನ್ನು ಅಭ್ಯರ್ಥಿಗಳು ತಿಳಿದು, ಸಕಲ ಸಿದ್ಧತೆಗಳನ್ನು ಸರಿಯಾದ ಕ್ರಮದಲ್ಲಿ ಮಾಡಿಕೊಳ್ಳಿ.

ಪಿಯು ಉಪನ್ಯಾಸಕ ಹುದ್ದೆಗೆ ವಿದ್ಯಾರ್ಹತೆ
ಪಿಯು ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಹುದ್ದೆ ವಿಷಯದಲ್ಲಿ ಕನಿಷ್ಠ ದ್ವಿತೀಯ ದರ್ಜೆಯಲ್ಲಿ ಶೇಕಡ.55 ಅಂಕಗಳೊಂದಿಗೆ ಪಾಸ್‌ ಆಗಿರಬೇಕು.
ಕಡ್ಡಾಯವಾಗಿ ಬಿ.ಇಡಿ (Bachelor of Education – B.Ed) ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.
ಕೆಟಗರಿ 2A, 2B, 3A, 3B ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ ಮೀರಿರಬಾರದು.
ಎಸ್‌ಸಿ / ಎಸ್‌ಟಿ / ಕೆಟಗರಿ -1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಮೀರಿರಬಾರದು.

ವೇತನ ಎಷ್ಟು?

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪಿಯು ಉಪನ್ಯಾಸಕ ಹುದ್ದೆಗಳಿಗೆ ವೇತನ ಶ್ರೇಣಿ ಬೇಸಿಕ್ ಪೇ ರೂ.22,800 ಜತೆಗೆ ಇತರೆ ಭತ್ಯೆಗಳು ಸೇರಿ 43,280 ವರೆಗೆ ಇರುತ್ತದೆ. ಮನೆ ಬಾಡಿಗೆ ಭತ್ಯೆ ಹುದ್ದೆ ಪ್ರದೇಶದ ಮೇಲೆ ವ್ಯತ್ಯಾಸದಿಂದ ಇರುತ್ತದೆ.

ವಿಷಯವಾರು ಪಿಯು ಉಪನ್ಯಾಸಕ ಹುದ್ದೆಗಳ ವಿವರ
ಕನ್ನಡ – 100, ಇಂಗ್ಲಿಷ್- 120, ಇತಿಹಾಸ -120, ಅರ್ಥಶಾಸ್ತ್ರ -180, ಭೂಗೋಳಶಾಸ್ತ್ರ -20, ವಾಣಿಜ್ಯಶಾಸ್ತ್ರ- 80, ಸಮಾಜಶಾಸ್ತ್ರ -75, ರಾಜ್ಯಶಾಸ್ತ್ರ- 75, ಮನಃಶಾಸ್ತ್ರ -02,
ಗಣಕ ವಿಜ್ಞಾನ- 06.
ಒಟ್ಟು : 778

ಪಿಯು ಉಪನ್ಯಾಸಕರ ಸ್ಪರ್ಧಾತ್ಮಕ ಪರೀಕ್ಷೆ ಮಾದರಿ
ಪಿಯು ಉಪನ್ಯಾಸಕ ಹುದ್ದೆಗೆ ಈ ಕೆಳಗಿನ ಪ್ರಶ್ನೆ ಪತ್ರಿಕೆಗಳಿಗೆ ಪರೀಕ್ಷೆ ಇರುತ್ತದೆ. ಮೂರು ಗಂಟೆ ಕಾಲ ಒಂದು ಪತ್ರಿಕೆ ಪರೀಕ್ಷೆ ನಡೆಯುತ್ತದೆ. ಒಟ್ಟು 400 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಈ ಕುರಿತು ಡೀಟೇಲ್ಸ್‌ ಈ ಕೆಳಗಿನಂತಿದೆ.

ನಿರ್ದಿಷ್ಟ ಪತ್ರಿಕೆ – 1 : 150 ಅಂಕಗಳಿಗೆ ಪರೀಕ್ಷೆ.
ನಿರ್ದಿಷ್ಟ ಪತ್ರಿಕೆ – 2 : 150 ಅಂಕಗಳಿಗೆ ಪರೀಕ್ಷೆ.
ಕಡ್ಡಾಯ ಕನ್ನಡ ಪರೀಕ್ಷೆ (ಎಲ್ಲರಿಗೂ) : 100 ಅಂಕಗಳಿಗೆ.

ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಪ್ರಾಧಿಕಾರ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಗಳಿಸಿ, ಪಾಸ್ ಮಾಡಬೇಕು. ಆದರೆ ಈ ಪತ್ರಿಕೆ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.

See also  ಭಾರತವನ್ನು ಜಗತ್ತಿನ ಅತ್ಯಂತ ಎತ್ತರಕ್ಕೆ ಕೊಂಡೊಯ್ದ ದೇಶದ ಆದರ್ಶ ಪುರುಷ ಪ್ರಧಾನಿ ನರೇಂದ್ರ ಮೋದಿ - ನಳಿನ್ ಕುಮಾರ್ ಕಟೀಲ್

ಅರ್ಜಿ ಸಲ್ಲಿಸುವುದು ಹೇಗೆ?
ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಹಿಂದೆ ಪಿಯು ಉಪನ್ಯಾಸಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ನಡೆಸಿ ಭರ್ತಿ ಮಾಡಿತ್ತು. ಈ ಬಾರಿಯೂ ಅಧಿಸೂಚನೆಯನ್ನು ಕೆಇಎ ಮೂಲಕವೇ ಹೊರಡಿಸಿ, ಅರ್ಜಿ ಆಹ್ವಾನಿಸಲಾಗುತ್ತದೆ. ಆಗ ಅಭ್ಯರ್ಥಿಗಳು ವೆಬ್‌ಸೈಟ್‌ http://kea.kar.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.

ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು, ಪ್ರತ್ಯೇಕ ಶುಲ್ಕ ಪಾವತಿ ಮಾಡಬೇಕು.

ಅರ್ಜಿ ಶುಲ್ಕ ಎಷ್ಟಿರುತ್ತದೆ?
ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.2,500.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.2000.

ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!