ನೇಸರ ಆ.26: ಯಾವುದೇ ಕೆಲಸದ ಹಿಂದೆ ನಿರ್ದಿಷ್ಟ ಕಾರಣ ಮತ್ತು ಭಗವಂತನ ಪ್ರೇರಪಣೆ ಇರುತ್ತದೆ. ಮನಸ್ಸಿನ ಪ್ರೇರಣೆಯಿಂದ ಕೆಲವೊಮ್ಮೆ ನಮ್ಮಿಂದ ಕೆಟ್ಟ ಕೆಲಸಗಳು ನಡೆಯುತ್ತವೆ. ಇವುಗಳ ಪಾಪವನ್ನು ತೊಳೆಯಲು ಭಜನೆ ಪೂಜೆ ಧ್ಯಾನ ಅನುಷ್ಠಾನವನ್ನು ಮಾಡಬೇಕು. ಪಂಚೇಂದ್ರಿಯಗಳ ಆಕರ್ಷಣೆಗೆ ಬಂದಿಗಳಾಗದೆ ಸೇವಾರೂಪದಲ್ಲಿ ಕಾರ್ಯ ನಿರತರಾಗುವವರಿಗೆ ಭಗವಂತನ ಆಶೀರ್ವಾದ ಇರುತ್ತದೆ ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ತಮ್ಮ ಚಾತುರ್ಮಾಸ್ಯ ವೃತದ 45ನೇ ದಿನವಾದ ಆ.26 ರಂದು ಆಶೀರ್ವಚನ ನೀಡಿದರು. ನಾನು ಎಂಬ ಅಹಂ ಭಾವ ತೊರೆದು ಜಿಹ್ವಾ ಚಾಪಲ್ಯಕ್ಕೆ ಕಡಿವಾಣ ಹಾಕಿ, ತ್ಯಾಗದ ಮೂಲಕ ಬದುಕಿ ಪರಮಾತ್ಮನನ್ನು ಕಾಣಬೇಕು. ಪ್ರತಿಯೊಬ್ಬನಿಗೆ ಸುಖ ದುಃಖಗಳು ಸಾಮಾನ್ಯ. ಸುಖ ಬಂದಾಗ ಎಲ್ಲವನ್ನು ಮರೆಯಬಾರದು. ಸಮತೋಲನದ ಮೂಲಕ ಬದುಕುವ ಜತೆಗೆ ಭಕ್ತಿ ಭಾವಗಳನ್ನು ಒಗ್ಗೂಡಿಸಿಕೊಂಡರೆ ಭಗವಂತ ಒಲಿಯುತ್ತಾನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮತ್ತು ಕುಟುಂಬಸ್ಥರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮೂಡಬಿದ್ರೆ ಬಿಜೆಪಿ ಯುವ ಮೋರ್ಚಾಅಧ್ಯಕ್ಷ ಅಶ್ವತ್ ಪನಪಿಲ ಪಾದುಕಾ ಪೂಜೆ ನೆರವೇರಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಚಾತುರ್ಮಸ್ಯ ಸಮಿತಿ ಸಂಚಾಲಕ ಜಯಂತ್ ಕೋಟ್ಯಾನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೊರಗಪ್ಪ ಗೌಡ, ಸುಧೀರ್ ಸುವರ್ಣ, ಗುಣಸಾಗರ ಚಾರ್ಮಾಡಿ, ಸಂಪತ್ ಸುವರ್ಣ ಬೆಳ್ತಂಗಡಿ, ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ರಮಾನಂದ ಮುಂಡೂರು, ಪ್ರಶಾಂತ್ ಮಚ್ಚಿನ, ಹರೀಶ್ ಸುವರ್ಣ, ಅಣ್ಣಿ ಪೂಜಾರಿ, ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲ ಬೈಲು, ಪ್ರಶಾಂತ್ ಪಾರೆಂಕಿ, ಸ್ಮಿತೇಶ್ ಬಾರ್ಯ, ಚಿದಾನಂದ ಇಡ್ಯಾ, ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಗಣೇಶ್ ಶಿರ್ಲಾಲು, ಕಾರ್ಯದರ್ಶಿ ಚೈತೇಶ್ ಇಳಂತಿಲ ಮತ್ತು ಸದಸ್ಯರು ಹಾಗು ಇನ್ನಿತರರು ಉಪಸ್ಥಿತರಿದ್ದು ಗುರುಗಳ ಆಶೀರ್ವಾದ ಪಡೆದುಕೊಂಡರು. ಚಾರ್ಮಾಡಿ ಗ್ರಾಮಸ್ಥರಿಂದ ಭಜನೆ ನಡೆಯಿತು.