ನೇಸರ ಆ.28: ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠದ ಪೀಠಾಧಿಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ 47ನೇ ದಿನ ಆ.28 ರಂದು ಪಾದುಕಾ ಪೂಜೆಯನ್ನು ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳದ ಡಿ. ಆರ್. ರಾಜು, ಬೆಂಗಳೂರಿನ ಉದ್ಯಮಿ ಗೋವಿಂದ ಬಾಬು, ಮುಂಬಯಿಯ ಉದ್ಯಮಿ ಸುರೇಶ ಪೂಜಾರಿ ನೇರವೇರಿಸಿದರು.
ನಾರಾಯಣ ಗುರು ವಿಚಾರ ವೇದಿಕೆಯ ಸತ್ಯಜೀತ್ ಸುರತ್ಕಲ್, ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಲೋಕೇಶ್ ಪೂಜಾರಿ ಕೋಡಿಕೆರೆ, ಸುಕುಮಾರ್ ಎಡಪದವು, ಉಜಿರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಮಲವಂತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ. ದಿನೇಶ್ ಗೌಡ, ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲ ಬೈಲು, ಉಡುಪಿ ಶ್ರೀ ಆತ್ಮನಂದ ಸರಸ್ವತಿ ಐಟಿಐ ಕಾಲೇಜಿನ ಓಬು ಪೂಜಾರಿ, ಬಾಲಕೃಷ್ಣ ಬನ್ನಂಜೆ, ಅಲಡ್ಕ ಹಿಂದೂ ಯುವ ಶಕ್ತಿ ಸದಸ್ಯರು ಇನ್ನಿತರ ಗಣ್ಯರು, ಭಕ್ತರು ಉಪಸ್ಥಿತರಿದ್ದರು.
ಇಂದು ಚಾತುರ್ಮಾಸ್ಯ ವೃತ ಸಂಪನ್ನ
48 ದಿನಗಳ ಚಾತುರ್ಮಾಸ್ಯ ವೃತ ಇಂದು ಸಂಪನ್ನಗೊಳ್ಳಲಿದೆ. ಬೆಳಿಗ್ಗೆ 9:00ಗೆ ಶ್ರೀ ಗುರುದೇವ ಮಠದಿಂದ ಮೆರವಣಿಗೆ ಮೂಲಕ ನೇತ್ರಾವತಿಗೆ ಆಗಮಿಸಿ ಸೀಮೋಲ್ಲಂಘನ ಕಾರ್ಯಕ್ರಮ ಜರಗಲಿದೆ. ನೇತ್ರಾವತಿ ಪೂಜೆ ಸಲ್ಲಿಸಿ, ಬಳಿಕ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ, ಶ್ರೀರಾಮ ಸಹಿತ ಪರಿವಾರ ದೇವರುಗಳಿಗೆ ಸ್ವಾಮೀಜಿ ಪೂಜೆ ಸಲ್ಲಿಸಲಿದ್ದಾರೆ.
ಸತ್ಯ, ಧರ್ಮಗಳನ್ನು ಪಾಲಿಸಿ ಸತ್ಕರ್ಮಗಳನ್ನು ಮಾಡಬೇಕು. ವಂಚನೆ, ಮೋಸ, ಅರಿ ಷಡ್ವರ್ಗಗಳ ಮೂಲಕ ನಮ್ಮನ್ನು ನಾವೇ ವಂಚಿಸುವ ಕೆಲಸ ಮಾಡಬಾರದು. ಇನ್ನೊಬ್ಬರ ಬಗ್ಗೆ ದೋಷಾರೋಪಣೆ ಮಾಡುವುದನ್ನು ಬಿಟ್ಟು ನಮ್ಮ ಬಗ್ಗೆ ನಾವು ಯೋಚಿಸಬೇಕು. ಭಗವಂತನ ಬೆಳಕು, ದೈವ ಸಂಕಲ್ಪವಿದ್ದರೆ ಜೀವನದಲ್ಲಿ ಮುಂದೆ ಬರಬಹುದು ಎಂದು ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.