ಉಪ್ಪಾರಪಳಿಕೆ: ಶ್ರೀಕೃಷ್ಣ ಮೈದಾನದಲ್ಲಿ 23ನೇ ವರ್ಷದ ಮೊಸರು ಕುಡಿಕೆ ಉತ್ಸವ

ಶೇರ್ ಮಾಡಿ

ನೇಸರ ಆ.29: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 23ನೇ ವರ್ಷದ ಮೊಸರು ಕುಡಿಕೆ ಉತ್ಸವವು ಕೊಕ್ಕಡದ ಉಪ್ಪಾರಪಳಿಕೆಯ ಶ್ರೀಕೃಷ್ಣ ಮೈದಾನದಲ್ಲಿ ಆ.28ರ ಭಾನುವಾರ ನಡೆಯಿತು.
ಕ್ರೀಡಾ ಉತ್ಸವವನ್ನು ಹಿಂದೂ ಬಾಂಧವರು ಭಜನೆ ಹೇಳುವ ಮೂಲಕ ಆರಂಭಿಸಿದರು. ಈ ಸಂದರ್ಭ ಭಾರತಾಂಬೆಗೆ ಹಾಗೂ ವೀರ ಸಾವರ್ಕರ್ ಫೋಟೋಗೆ ಪುಷ್ಪಾಂಜಲಿ ಅರ್ಪಿಸಲಾಯಿತು.
ಕ್ರೀಡಾಕೂಟದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪುಟಾಣಿಗಳು ಕೃಷ್ಣನ ವೇಷದಲ್ಲಿ ಕುಣಿದು ಕುಪ್ಪಳಿಸುವುದು ನೋಡುಗರ ಮನಸೂರೆಗೊಂಡವು.
ಉಪ್ಪಾರಪಳಿಕೆಯ ಶ್ರದ್ಧಾ ಗೆಳೆಯರ ಬಳಗ ಹಾಗೂ ಹಿಂದೂ ಬಾಂಧವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಆಲಂಬಿಲ, ಶ್ರದ್ಧಾ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀಧರ ದೇರಾಜೆ, ಹೇಮಾವತಿ ಸಂಕೇಶ, ಶೋಭಾ ನಾರಾಯಣ, ಶ್ರದ್ಧಾ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶ್ರೀನಾಥ್ ಬಿ. ಕೇಶವ ಹಳ್ಳಿಂಗೇರಿ, ಕಲ್ಕುಡ ಕಲ್ಲುರ್ಟಿ ಗ್ರಾಮ ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಗಿರಿಯಪ್ಪ ಗೌಡ ಆಲಂಬಿಲ, ಬಾಲಕೃಷ್ಣ, ಶ್ರೀಧರ ಬಳಕ್ಕ, ಶಿವಾನಂದ ಸಂಕೇಶ, ದಾಮೋದರ ಅಜ್ಜಾವರ, ಮೋಹನ್ ಕೊಡಿಂಗೇರಿ, ಶೀನಾ ಅಡೈ ಮತ್ತು ಶ್ರದ್ಧಾ ಗೆಳೆಯರ ಬಳಗದ ಸದಸ್ಯರು, ಹಿಂದೂ ಬಾಂಧವರು ಉಪಸ್ಥಿತರಿದ್ದು ಸಹಕರಿಸಿದರು. ಶ್ರೀ ಕ್ಷೇತ್ರ ಸೌತಡ್ಕದ ವತಿಯಿಂದ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

Leave a Reply

error: Content is protected !!