ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ : ಕಬ್ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ರಾಷ್ಟ್ರಮಟ್ಟದ ಗೋಲ್ಡನ್ ಆ್ಯರೋ ಪ್ರಶಸ್ತಿ

ಶೇರ್ ಮಾಡಿ

ನೇಸರ ಆ.29: ಪುತ್ತೂರು 2021-22ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕಬ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿಯಾಗಿರುವ ಗೋಲ್ಡನ್ ಆ್ಯರೋಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನ 5ನೇ ತರಗತಿಯ 8 ಕಬ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ತುಷಾರ್.ಎಸ್ ( ಸಂಕಪ್ಪ ಗೌಡ ಹಾಗೂ ಭಾಗೀರಥಿ ದಂಪತಿ ಪುತ್ರ), ನಮೃತ್.ಜಿ (ವಾಸು ಪೂಜಾರಿ ಹಾಗೂ ಶೇಷಮ್ಮ ದಂಪತಿ ಪುತ್ರ), ಕೆ .ವೈಷ್ಣವ್( ವಿನಯಕುಮಾರ್ ಹಾಗೂ ಸೌಮ್ಯಕುಮಾರಿ ದಂಪತಿ ಪುತ್ರ), ದಕ್ಷ್. ಎನ್ (ನಾರಾಯಣ ನಾಯ್ಕ್ ಹಾಗೂ ಗಾಯತ್ರಿ .ಪಿ ದಂಪತಿ ಪುತ್ರ), ದಿಶಾಂತ್ ಬಿ (ಬಾಲಕೃಷ್ಣ ಹೆಗಡೆ ಹಾಗೂ ದಿವ್ಯ ದಂಪತಿ ಪುತ್ರ) ಶ್ರೇಯಾಂಕ್(ಉದಯ ಆಚಾರ್ಯ ಹಾಗೂ ರಂಜಿತಾ ದಂಪತಿ ಪುತ್ರ), ವಿಹಾನ್ ಜಿ. ಎಸ್ ( ಗುರು ರಾಜೇಶ್ .ಎಂ ಹಾಗೂ ಸುಚಿತ್ರ ದಂಪತಿ ಪುತ್ರ ) ಮತ್ತು ಯಜ್ಞೇಶ್.ಬಿ (ಬಾಲಚಂದ್ರ ಹಾಗೂ ಉಷಾ ದಂಪತಿ ಪುತ್ರ). ಇವರಿಗೆ ಲೇಡಿ ಕಬ್ ಮಾಸ್ಟರ್ಸ್ ಶ್ರೀಮತಿ ಪುಷ್ಪಲತ.ಕೆ ಹಾಗೂ ಕು.ರಮ್ಯರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯಗುರುಗಳು ತಿಳಿಸಿದ್ದಾರೆ.

See also  ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್; ಜಲಬಂಧನ ಮತ್ತು ವನಮಹೋತ್ಸವ

Leave a Reply

Your email address will not be published. Required fields are marked *

error: Content is protected !!