ಕೊಕ್ಕಡ: ಪತಿಯಿಂದ ಹಲ್ಲೆಗೊಳಗಾಗಿ ಪತ್ನಿ ಮೃತ ಪಟ್ಟಿರುವ ಶಂಕೆ: ಅನಾಥವಾದ ಮಗು

ಶೇರ್ ಮಾಡಿ

ನೇಸರ ಆ.30: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಇಂದು ಅ.30ರಂದು ಬೆಳಗ್ಗೆ 11:00ಗೆ ನಡೆದಿದೆ.
ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ್ ಎಂಬವರ ಪತ್ನಿ ಮೋಹಿನಿ(35ವ) ಮೃತಪಟ್ಟ ದುರ್ದೈವಿ.

ಮೂಲತಃ ಶನಿವಾರ ಸಂತೆಯ ನಿವಾಸಿಯಾಗಿದ್ದ ಗಣೇಶ ರವರು ಕೊಲ್ಲಮೊಗೇರು ನಿವಾಸಿ ಮೋಹಿನಿ ಎಂಬುವರನ್ನು ಮದುವೆಯಾಗಿದ್ದು. ಕಳೆದ ಸುಮಾರು 8ವರುಷದಿಂದೀಚೆಗೆ ಕೊಕ್ಕಡ ಸಮೀಪದ ಅಗರ್ತ ಎಂಬಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದರು. ವೃತ್ತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಈತ ವಿಪರೀತ ಕುಡಿತದ ಚಟವನ್ನು ಹೊಂದಿದ್ದ.
ಪತಿ ಹಾಗೂ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು. ಜಗಳ ತಾರಕಕ್ಕೇರಿ ಪತಿ ಹಲ್ಲೆ ನಡೆಸಿ ಪತ್ನಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಧರ್ಮಸ್ಥಳ ಹಾಗೂ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.
ದಂಪತಿಗಳ 3 ವರುಷದ ಮಗು ಕಿರಣ್ ಅನಾಥವಾಗಿರುವ ದೃಶ್ಯ ಮನ ಕಲುಕುತ್ತಿತ್ತು.

Leave a Reply

error: Content is protected !!