ಅರಂತೋಡು: ಹುಡುಗಿರ ಕಬಡ್ಡಿ ಪಂದ್ಯಾಟದಲ್ಲಿ ಅರಂತೋಡು ಕಾಲೇಜು ಜಿಲ್ಲಾಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

* ಸಾತ್ವಿ ಎಂ ವಿ ಉತ್ತಮ ರೈಡರ್ ಮತ್ತು ಇಂಚರ ಡಿ. ಆರ್. ಉತ್ತಮ ಹಿಡಿತಗಾರ್ತಿ ಪ್ರಶಸ್ತಿ*

ನೇಸರ ಆ.30: ಸುಳ್ಯ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು ಪಂಜದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಹುಡುಗಿರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಸಾತ್ವಿ ಎಂ ವಿ ಉತ್ತಮ ರೈಡರ್ ಮತ್ತು ದ್ವಿತೀಯ ವಿಜ್ಞಾನ ವಿಭಾಗದ ಇಂಚರ ಡಿ. ಆರ್. ಉತ್ತಮಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತಂಡದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ತೃಪ್ತಿ.ಕೆ.ಎಂ, ಅನುಷ.ಯು.ಎ, ದ್ವಿತೀಯ ವಾಣಿಜ್ಯ ವಿಭಾಗದ ದೀಪಿಕ.ಎ, ದ್ವಿತೀಯ ಕಲಾ ವಿಭಾಗದ ವಷಿಕಾ ಯು.ಆರ್, ಶಿಲ್ಪಾಶ್ರೀ ಕೆ.ಬಿ, ಪ್ರಥಮ ಕಲಾ ವಿಭಾಗದ ಧನುಷ್ಯ ಎಂ, ಮೋಕ್ಷ ಕೆ.ವಿ, ಬಿಂದು ಕೆ.ಎಂ ಮತ್ತು ಪ್ರಥಮ ವಿಜ್ಞಾನ ವಿಭಾಗದ ಭಾಗ್ಯಶ್ರೀ ಎನ್. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರೆ. ಕಾಲೇಜು ಪ್ರಾಂಶುಪಾಲರಾದ ರಮೇಶ್ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಶಾಂತಿ ಎ.ಕೆ ಮತ್ತು ದೈಹಿಕ ಶಿಕ್ಷಕರಾದ ಜಯರಾಮ ಪೆರುಮುಂಡ ತರಬೇತಿ ನೀಡಿರುತ್ತಾರೆ. ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಪದ್ಮಕುಮಾರ್ ತಂಡದ ವ್ಯವಸ್ಥಾಪಕರಾಗಿದ್ದಾರೆ.

Leave a Reply

error: Content is protected !!