ನೇಸರ ಆ.30: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 2021-22 ಎರಡನೇ ಸಾಲಿನ ಕಾರ್ಯ ಚಟುವಟಿಕೆಗಳ ಅವಲೋಕನ ಕಾರ್ಯಕ್ರಮ ಹಾಗೂ ದ್ವಿತೀಯ ಪದವಿಯ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ದಿನಾಂಕ 29.8.22 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ.ನಾಗರತ್ನ ಕೆ.ಎ ಹಾಗೂ ಅಲಂಕಾರು ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ನಿಂಗರಾಜು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ದತ್ತು ಗ್ರಾಮವಾದ ಅಲಂಕಾರಿನ ರವಿ ಪೂಜಾರಿ, ಅಬೂಬಕ್ಕರ್, ದಿನೇಶ್ ದೇವಾಡಿಗ, ನಾಗೇಶ್ ಕನಿಯ, ಹರೀಶ್ ಗೌಡ, ನೋಣಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಘಟಕದ ನಾಯಕರುಗಳಾದ ಇಂದ್ರಕುಮಾರ್, ಕುಮಾರಿ ಧನ್ಯ 2021-22ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಸ್ವಯಂಸೇವಕರಾದ ಕಾರುಣ್ಯ, ಸಂತೋಷ್, ವಿಂದ್ಯ ಅನುಭವಗಳನ್ನು ಹಂಚಿಕೊಂಡರು. ಮಹಾವಿದ್ಯಾಲಯದ ಯೋಜನಾಧಿಕಾರಿಗಳಾದ ಶ್ರೀಮತಿ ಆರತಿ ಕೆ. ವಂದಿಸಿದರು, ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಕುಮಾರ ಶೇಣಿ ವಂದಿಸಿದರು. ಸಂಯೋಜಕಿ ಶ್ರೀಮತಿ ನಮಿತಾ ಎಂ ಎ, ನಾಯಕರುಗಳಾದ ಹರಿ ಚಂದನ್ ಹಾಗೂ ಜಯಶ್ರೀ, ಮೊಕ್ಷಿತ ಹಾಗೂ ವಿಜ್ಞೇಶ್ ಕಾರ್ಯಕ್ರಮ ನಿರೂಪಿಸಿದರು.