ಇಚ್ಲಂಪಾಡಿ: 10ನೇ ವರ್ಷದ ಗಣೇಶೋತ್ಸವ ,”ಎಲ್ಲರಲ್ಲೂ ಭಗವಂತನ ಚೇತನ ಇದೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಿರಿ”.ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ಶೇರ್ ಮಾಡಿ

ನೇಸರ ಸೆ. 02 : ಇಚ್ಲಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು  ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಸಹಭಾಗಿತ್ವದಲ್ಲಿ  ನಡೆದ 10ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅತ್ಯಂತ ಸಂಭ್ರಮದಿಂದ ಜರಗಿತು. ಆ.30 ಹಾಗೂ 31ರಂದು ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು .ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಭಟ್‌ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆದಿದೆ.

ಆ.30ರಂದು ಸಾಯಂಕಾಲ ಗಂಟೆ 5.30 ಕ್ಕೆ ಶ್ರೀ ಗಣಪತಿ ದೇವರ ವಿಗ್ರಹ ಆಗಮನ , ಗಂಟೆ 6 ರಿಂದ ಗೌರಿ ಹಬ್ಬದ ಪ್ರಯುಕ್ತ ರಾತ್ರಿ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ನೇರ್ಲ ಸರಕಾರಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ, ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.

ಆ.31ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಹೋಮ ನಡೆಯಿತು. ಬೆಳಿಗ್ಗೆ 7.32ರ ಸಿಂಹ ಲಗ್ನದಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠೆ ನಡೆದ ನಂತರ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ.

ಪೂರ್ವಾಹ್ನ 10.30ಕ್ಕೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡುತ್ತಾ “ಎಲ್ಲರಲ್ಲೂ ಭಗವಂತನ ಚೇತನ ಇದೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಿರಿ”.ಹಿಂದೂ ಧರ್ಮದಲ್ಲಿ ನಾವಿಂದು ವರ್ಚಸ್ಸು ಮತ್ತು ತೇಜಸ್ಸನ್ನು ಕಳೆದುಕೊಳ್ಳುತ್ತಿದ್ದೇವೆ. ಮನೆಮನೆಗಳಿಗೆ ಸಂಸ್ಕಾರ ಕಲಿಸುವ ಕೆಲಸ ನಮ್ಮಿಂದಾಗಲಿ . 

ವೈಯ್ಯಕ್ತಿಕ ಸಂಸ್ಕಾರದಿಂದ ವ್ಯಕ್ತಿತ್ವ ರೂಪಿಸಬಹುದು ಮೂಡನಂಬಿಕೆ ಬಿಟ್ಟು ಮೂಲನಂಬಿಕೆ ಉಳಿಸಿಕೊಳ್ಳಬೇಕು. ಗ್ರಾಮ,ಸೀಮೆ,ಕುಟುಂಬದ ದೈವ, ದೇವರ ಮೇಲೆ ನಂಬಿಕೆ ಇರಬೇಕು. ಗುರು ಹಿರಿಯರ ಆಶೀರ್ವಾದ ಪಡೆಯಬೇಕು. 

ಇಲ್ಲಿನ ಸಂಸ್ಕೃತಿಯ ಪಾವಿತ್ರ್ಯತೆ ಉಳಿಸಿಕೊಳ್ಳಬೇಕೆಂದು ಹೇಳಿದ ಅವರು, ಮಕ್ಕಳು, ಮಹಿಳೆಯರು ವಾರದ ಭಜನೆಯಲ್ಲಿ ನಿರಂತರ ಪಾಲ್ಗೊಳ್ಳಬೇಕು. ಸಿದ್ಧಿವಿನಾಯಕ ಭಜನಾ ಮಂದಿರಕ್ಕೆ ಸಹಕಾರ ನೀಡುವುದಾಗಿ ಹೇಳಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ  ಅಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಕ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ

ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಶುಭಾಕರ ಹೆಗ್ಗಡೆ, ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಇಚ್ಲಂಪಾಡಿ ಒಕ್ಕೂಟದ ಅಧ್ಯಕ್ಷ ಅನಿಲ್‌ಕುಮಾರ್ ಕಟ್ಟತ್ತಂಡ,ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಜಾಣಪ್ಪ ಪೂಜಾರಿ,ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ದೇವಕಿ ಕುಡಾಲ,ಇಚ್ಲಂಪಾಡಿ ಕಡೆಂಬೇಲು ಮಂಜುಶ್ರೀ ಭಜನಾ ಮಂಡಳಿಯ ಅಧ್ಯಕ್ಷ ತನಿಯಪ್ಪ ಮೊಂಟೆತ್ತಡ್ಕ,ಇಚ್ಲಂಪಾಡಿ ಶಂಖದ್ವೀಪ ಗೌರಿ ಶಂಕರ ಭಜನಾ ಮಂಡಳಿ ಅಧ್ಯಕ್ಷೆ ರಾಜಮ್ಮ ಚಂದ್ರಶೇಖರನ್ ನಾಯರ್ ಅತಿಥಿಗಳಾಗಿ ಭಾಗವಹಿಸಿದರು.

ಮಾಜಿ ಅಧ್ಯಕ್ಷ/ ಕಾರ್ಯದರ್ಶಿಗಳಿಗೆ ಗೌರವಾರ್ಪಣೆ

ಶ್ರೀ ಸಿದ್ಧಿವಿನಾಯಕ ಭಜನಾಮಂದಿರದ ಅಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದ ರವೀಂದ್ರ ಬಿಜೇರು ರಾಧಾಕೃಷ್ಣ ಕೆರ್ನಡ್ಕ, ಪೂವಪ್ಪ ಗೌಡ ಪುಳಿತ್ತಡಿ, ಅನಿಲ್‌ಕುಮಾರ್ ಉಮೆಸಾಗು, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ರಾಜಶೇಖರ ನಾಯರ್ ಮಾನಡ್ಕ, ಹರೀಶ್ ಗೌಡ ಅಲೆಕ್ಕಿ, ಶಿವಪ್ಪ ಗೌಡ ಬಿಜೇರು, ಮೋಹನ್ ಕೆರ್ನಡ್ಕ, ಉಮೇಶ್ ಶೆಟ್ಟಿ ಮಾನಡ್ಕ, ದಿನಕರ ಶೆಟ್ಟಿ ಹೊಸಮನೆ, ಗಣೇಶೋತ್ಸವ ಸಮಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹರೀಶ್ ಗೌಡ ನೇರ್ಲ, ರವೀಂದ್ರ ಬಿಜೇರು, ಪೂವಪ್ಪ ಗೌಡ ಪುಳಿತ್ತಡಿ, ಉದಯಕುಮಾರ್ ಹೊಸಮನೆ, ಕೇಶವ ಗೌಡ ಅಲೆಕ್ಕಿ, ಬಾಲಕೃಷ್ಣ ಎಸ್.ಕೆ.ಕುಡಾಲ, ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಗಿರೀಶ್ ಸಾಲಿಯಾನ್ ಬದನೆ, ಶಾಂತರಾಮ ಕುಡಾಲ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಶಶಿಧರ ಪೊಯ್ಯೆತ್ತಡ್ಡ, ಸದಾನಂದ ಶೆಟ್ಟಿ ಗುತ್ತಿನಮನೆ, ಅಕ್ಷತ್ ಶೆಟ್ಟಿ ನೇರ್ಲ, ದಿನೇಶ್ ಪೂಜಾರಿ ಬರಮೇಲು, ಪ್ರಶಾಂತ ಪೂಜಾರಿ ಬರಮೇಲು, ಚೆನ್ನಪ್ಪ ಪರವ ಬಿಜೇರು, ಶ್ರೀಧರ ಎನ್.ಬಿಜೇರು, ಅಕ್ಷಯ್ ಗೌಡ ನೇರ್ಲ, ಲೋಹಿತ್ ಬಿಜೇರು ಅವರಿಗೆ ಸ್ವಾಮೀಜಿ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.

ದಾನಿಗಳಿಗೆ ಗೌರವಾರ್ಪಣೆ

ಸತತ 10 ವರ್ಷಗಳಿಂದ ಗಣಪತಿ ವಿಗ್ರಹದ ದಾನಿಯಾಗಿರುವ ಭೂಸೇನೆ ಸೈನಿಕರಾದ ಸಂತೋಷ್ ಗೌಡ ನೇರ್ಲ, ಶೋಭಾಯಾತ್ರೆಗೆ ಟ್ರ್ಯಾಕ್ಟರ್ ದಾನಿಗಳಾದ ಭಾಸ್ಕರ ಗೌಡ ಪದಕ, ಭಜನಾ ತಂಡದ ಮಕ್ಕಳಿಗೆ ಸಮವಸ್ತ್ರ ನೀಡಿದ ಲೋಕೇಶ್ ಶೆಟ್ಟಿ ನೇರ್ಲ, ಭಜನಾ ಮಂದಿರಕ್ಕೆ ಧ್ವನಿವರ್ಧಕ ದಾನಿ ಜಯನ್ ನೀತಿ, ಶೋಭಾಯಾತ್ರೆಯ ವಾಹನದ ಚಾಲಕ ರಾಮಚಂದ್ರ ಪದಕ, ಭಜನಾ ದಿನದಂದು ವಿಶೇಷ ಸೇವೆ ಸಲ್ಲಿಸುತ್ತಿರುವ ಮೋನಪ್ಪ ನಿಡ್ಯಡ್ಕ, ಕಳೆದ 3 ವರ್ಷ ಕಾರ್ಯಕ್ರಮ ನೀಡಿದ ಇಚ್ಲಂಪಾಡಿ ಸಪ್ತಸ್ವರಂ ಮ್ಯೂಸಿಕ್‌ನ ಉದಯಕುಮಾರ್ ಹೊಸಮನೆ, ಕುಣಿತ ಭಜನಾ ತಂಡದ ಮಕ್ಕಳಿಗೆ ತರಬೇತಿ ನೀಡಿದ ಸಚಿನ್ ನೇರ್ಲ, ಅಕ್ಷಯ್ ನೇರ್ಲರವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಾರದ ಭಜನೆಯಲ್ಲಿ ನಿರಂತರ ಪಾಲ್ಗೊಳ್ಳುತ್ತಿರುವ ಮಕ್ಕಳಿಗೆ ಸ್ವಾಮೀಜಿಯವರು ಕೇಸರಿ ಶಾಲು ಹಾಕಿ ಗೌರವಿಸಿದರು. ಗಣೇಶೋತ್ಸವಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ನೇರ್ಲ ಸ್ವಾಗತಿಸಿದರು. ಶ್ರೀಮತಿ ನಂದಾ ಪಾದೆ ವಂದಿಸಿದರು. ರಾಧಾಕೃಷ್ಣ ಗೌಡ ಕೆರ್ನಡ್ಕ, ರವೀಂದ್ರ ಬಿಜೇರು ಕಾರ್ಯಕ್ರಮ ನಿರೂಪಿಸಿದರು. ಮೇಘಾ, ದಕ್ಷಾ ಹಾಗೂ ಮೋಕ್ಷಿತ ಪ್ರಾರ್ಥಿಸಿದರು. ಸ್ವಾಮೀಜಿಯವರನ್ನು ಇಚ್ಲಂಪಾಡಿ ಜಂಕ್ಷನ್‌ನಿಂದ ಕುಣಿತ ಭಜನೆ ಹಾಗೂ ಸುಮಂಗಲೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಭಜನಾಮಂದಿರಕ್ಕೆ ಕರೆತರಲಾಯಿತು. ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಂಜೆ 3 ಗಂಟೆಯಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಿತು.

ಭಜನಾ ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆ ಕಾಯರ್ತಡ್ಕ ರಾಜನ್‌ದೈವದ ಕಟ್ಟೆಯ ತನಕ ತೆರಳಿ ಅಲ್ಲಿಂದ ಮತ್ತೆ ಇಚ್ಲಂಪಾಡಿಗೆ ಆಗಮಿಸಿ ಕುರಿಯಾಳಕೊಪ್ಪ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕ್ರಾಸ್ ಬೇರಿಕೆ ತನಕ ಸಾಗಿ ಮತ್ತೆ ಹಿಂತಿರುಗಿ ಶಂಖದ್ವೀಪ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಪಕ್ಕ ವಿಗ್ರಹದ ಜಲಸ್ತಂಭನ ಮಾಡಲಾಯಿತು. 

ಶೋಭಾಯಾತ್ರೆಯಲ್ಲಿ ಟೀಮ್ ಎಸ್‌ಆರ್‌ಕೆ ಪುತ್ತೂರು ಇವರಿಂದ ನಾಸಿಕ್ ಬ್ಯಾಂಡ್ ನಡೆಯಿತು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ, ಇಚ್ಲಂಪಾಡಿ ಕಡೆಂಬೇಲು ಶ್ರೀ ಮಂಜುಶ್ರೀ ಭಜನಾ ಮಂಡಳಿ, ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ, ಇಚ್ಲಂಪಾಡಿ ಶಂಖದ್ವೀಪ ಶ್ರೀ ಗೌರಿಶಂಕರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ನೆಲ್ಯಾಡಿ ಶ್ರೀರಾಮ ಶಾಲಾ ಮಕ್ಕಳಿಂದ ಸಂಭ್ರಮದ ಶ್ರೀಕೃಷ್ಣಾಷ್ಟಮಿ ಆಚರಣೆ

💮ಜಾಹೀರಾತು💮

Leave a Reply

error: Content is protected !!