ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಉಪನ್ಯಾಸ

ಶೇರ್ ಮಾಡಿ

ನೇಸರ ಸೆ.02: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಉಪನ್ಯಾಸವು ನಡೆಯಿತು. ಕಡಬ ಆರಕ್ಷಕ ಠಾಣೆಯ ಪೋಲೀಸ್ ಉಪನಿರೀಕ್ಷಕರಾದ ಶ್ರೀ ಆಂಜನೇಯ ರೆಡ್ಡಿಯವರು ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ಅವರು ಮಾತನಾಡುತ್ತಾ ” ಕಾಲೇಜು ಜೀವನವೆಂದರೆ ಅತ್ಯಂತ ಅಮೂಲ್ಯವಾದ ಅವಧಿ.ಅದನ್ನು ಗೋಲ್ಡನ್ ಲೈಫ್ ಎಂದು ಹೇಳಬಹುದು. ಹಾಗಾಗಿ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸಮಯವನ್ನು ವ್ಯರ್ಥ ಮಾಡದೇ ತಮ್ಮ ಮುಂದಿನ ಜೀವನ ಕಟ್ಟಿಕೊಳ್ಳಲು ಬೇಕಾದ ಭದ್ರ ಬುನಾದಿಯನ್ನು ಹಾಕಿಕೊಳ್ಳಬೇಕು. ಹಾಗಾಗಿ ಈ ಕಾಲೇಜು ಜೀವನ ಬಹಳ ಪ್ರಮುಖ.” ಎಂದು ಹೇಳಿದರು.ಅದಲ್ಲದೆ ಅವರು ತಮ್ಮ ಉಪನ್ಯಾಸದಲ್ಲಿ ಕಾನೂನು, ರಸ್ತೆ ಸುರಕ್ಷತೆ, ಮೌಲ್ಯ ಮತ್ತು ಕೌಶಲ ಆಧಾರಿತ ಕಲಿಕೆಯ ಬಗ್ಗೆ ಬಹಳ ವಿಸ್ತಾರವಾಗಿ ಮಾಹಿತಿ ನೀಡಿದರು. ಸಂಸ್ಥೆಯವತಿಯಿಂದ ಅತಿಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ ಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ನಾಯಕ ಗಗನ್‌ದೀಪ್, ಕಾರ್ಯದರ್ಶಿ ಅನನ್ಯ ಕೆ, ಜತೆ ಕಾರ್ಯದರ್ಶಿ ಸಮೀಕ್ಷಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ದಕ್ಷಾ ಬಿ ಕೆ, ಮೋಹನ್ ಕುಮಾರ್ ಬಿ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ನಾಯಕರಾದ ಶರತ್‌ಚಂದ್ರ,, ಮೇಘಾ ಐ, ಕ್ರೀಡಾ ನಾಯಕರಾದ ಸಂಪ್ರೀತಾ ಪಿ ಮತ್ತು ಮನೀಶ್ ವೇದಿಕೆಯಲ್ಲಿದ್ದರು.

ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಶ್ರೀ ಸತೀಶ್ ಜಿ ಆರ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಶಿವಪ್ರಸಾದ್ ರವರು ಧನ್ಯವಾದ ಸಮರ್ಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು.

See also  ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

Leave a Reply

Your email address will not be published. Required fields are marked *

error: Content is protected !!