ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕಡಬ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ, ರಾಮಕುಂಜದ ವಿದ್ಯಾರ್ಥಿಗಳು ಪ್ರಥಮ

ಶೇರ್ ಮಾಡಿ

ನೇಸರ ಸೆ.04: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕಡಬ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟವು ನಡೆಯಿತು.
ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ದೀಪಬೆಳಗುವುದರ ಮೂಲಕ ನೆರವೇರಿಸಿದ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಯದುಶ್ರೀ ಆನೆಗುಂಡಿಯವರು ಮಾತನಾಡುತ್ತಾ, “ಕ್ರೀಡೆಯು ಪರಸ್ಪರ ಸ್ಪರ್ಧೆನ್ನು ಉಂಟುಮಾಡುತ್ತದೆ. ಈ ಸ್ಪರ್ಧೆಯು ಆರೋಗ್ಯಕರವಾಗಿರಬೇಕು, ಸಹನೆ ಮತ್ತು ಸಹಬಾಳ್ವೆಯ ಸಂದೇಶವನ್ನು ನಾವು ಅರಿತುಕೊಂಡು ಅದರಂತೆ ನಡೆಯಬೇಕು. ಆಟೋಟ ಅಂದರೆ ಸೋಲು, ಗೆಲುವು ಇರುವುದು ಸಹಜ. ಆದ್ರೆ ಪ್ರತಿ ಸಂಧರ್ಭಗಳಲ್ಲಿಯೂ ನಾವು ಹಿಗ್ಗದೆ, ಕುಗ್ಗದೆ ನಾವು ನಿರಂತರ ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕು.” ಎಂದು ಹೇಳಿದರು.

ಮುಖ್ಯ ಅತಿಥಿಯಾದ ಮೂರ್ತೆದಾರರ ಸೇವಾ ಸಹಕಾರಿ ಸಂಘ, ಕೊಯಿಲ ಇದರ ಸಲಹಾ ಸಮಿತಿಯ ಅಧ್ಯಕ್ಷರಾದ ಜನಾರ್ದನ ಕದ್ರರವರು ಮಾತನಾಡುತ್ತಾ “ಕ್ರೀಡೆಯು ಮಾನವನಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಯಾವಾಗ ನಮ್ಮ ದೇಶದ ವ್ಯಕ್ತಿಗಳು ಮುಖ್ಯವಾಗಿ ಯುವಜನರು ಶಾರೀರಿಕವಾಗಿ ಸಧೃಢಗೊಳ್ಳುತ್ತಾರೋ, ಅವಾಗ ಅವರ ಮನಸ್ಸು ಕೂಡ ಸದೃಢವಾಗಿ, ಪರಿಪೂರ್ಣ ವ್ಯಕ್ತಿಗಳ ನಿರ್ಮಾಣವಾಗುತ್ತದೆ. ಇಂಥಹ ವ್ಯಕ್ತಿಗಳಿಂದ ರಾಷ್ಟ್ರ ಸದೃಢದ ನಿರ್ಮಾಣವಾಗುತ್ತದೆ.” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಬಿ ಸುಬ್ರಹ್ಮಣ್ಯ ಕಾರಂತ್ ರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ವಿಶ್ವೇಶ್ವರ ಎಂ ಇವರು ಸ್ವಾಗತಿಸಿದರು. ಅಂಗ್ಲಭಾಷಾ ವಿಭಾಗದ ಸತೀಶ್ ಜಿ ಆರ್ ವಂದಿಸಿದರು. ಬಳಿಕ ಖೋ-ಖೋ ಪಂದ್ಯಾಟ ನಡೆಯಿತು.

ಫಲಿತಾಂಶ:
ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದರು. ಬೆಥನಿ ಪದವಿಪೂರ್ವ ಕಾಲೇಜು, ನೂಜಿಬಾಳ್ತಿಲದ ವಿದ್ಯಾರ್ಥಿಗಳು ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು.

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರುಗಳಾದ ಸತೀಶ್ ಭಟ್ ಬಿಲಿನೆಲೆ ಯವರು ಬಹುಮಾನ ವಿತರಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ ಎಸ್, ರಘುರಾಮ್ ಮತ್ತಿತರರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

error: Content is protected !!