ಇಚ್ಲಂಪಾಡಿ: ಕಾರು ಮರಕ್ಕೆ ಡಿಕ್ಕಿ ➽ ಮೂವರಿಗೆ ಗಂಭೀರ ಗಾಯ

ಶೇರ್ ಮಾಡಿ

ನೇಸರ ಸೆ.04: ಕಡಬ ತಾಲೂಕು ಇಚ್ಲಂಪಾಡಿ ಎಂಬಲ್ಲಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಒಟ್ಟು ಮೂರು ಮಂದಿ ಗಂಭೀರ ಗಾಯಗೊಂಡ ಘಟನೆ ಸೆ.4ರ ರಾತ್ರಿ 8.00ಕ್ಕೆ ನಡೆದಿದೆ.

ಹೆಬ್ರಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾರುತಿ ರಿಡ್ಸ್ ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದು. ಚಾಲಕನ ನಿಯಂತ್ರಣ ತಪ್ಪಿ ಇಚ್ಲಂಪಾಡಿ ಸಮೀಪ ರಸ್ತೆ ಬದಿಗಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರ ತಲೆಗೆ ಗಂಭೀರ ಪೆಟ್ಟಾಗಿದ್ದು, ಇನ್ನೊಬ್ಬ ಪ್ರಯಾಣಿಕನ ಕೈ ಮುರಿತಕ್ಕೊಳಗಾಗಿದೆ.
ಇವರನ್ನು ತಕ್ಷಣ ನೆಲ್ಯಾಡಿ ಅಶ್ವಿನಿ ಅಂಬುಲೆನ್ಸ್ ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

error: Content is protected !!