ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಶೇರ್ ಮಾಡಿ

ನೇಸರ ಸೆ.05: ನೆಲ್ಯಾಡಿ ಇತಿಹಾಸದಲೇ ಪ್ರಪ್ರಥಮ ಬಾರಿಗೆ ನೂತನವಾಗಿ ಮಹಿಳಾ ಸಹಕಾರ ಸಂಘ ಸೆ.9ರಂದು ಆರಂಭವಾಗಲಿದ್ದು. ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮವು ನೆಲ್ಯಾಡಿಯ ಲೋಟಸ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಇರುವ ಪ್ರಧಾನ ಕಚೇರಿ ಕಾಮಧೇನು ಮಹಿಳಾ ಸಹಕಾರ ಸಂಘದ ಕಚೇರಿಯಲ್ಲಿ ಸೆ.3ರಂದು ನಡೆಯಿತು.
ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ದಿವಾಕರ ಗೌಡ ಉದನೆ ದೀಪ ಪ್ರಜ್ವಲಿಸಿದರು. ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್‌ರವರು ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.

ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ಬಾಬುಪೂಜಾರಿ ಕಿನ್ಯಡ್ಕ, ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ವರ್ಗೀಸ್ ಅಬ್ರಹಾಂ, ಸ್ವಾತಿ ಕೊಲ್ಯೊಟ್ಟು, ಚೈತನ್ಯ ಕೌಕ್ರಾಡಿ, ಸಂಘದ ಪ್ರವರ್ತಕರಾದ ವಾರಿಜಾಕ್ಷಿ ಕೊಣಾಲು, ಶ್ರೀಲತಾ ಸಿ.ಹೆಚ್. ಮಾದೇರಿ, ಶಾಲಿನಿಶೇಖರ ಪೂಜಾರಿ ಗೋಳಿತ್ತೊಟ್ಟು, ಡೈಸಿ ವರ್ಗೀಸ್ ಇಚ್ಲಂಪಾಡಿ, ರತಿ ಶಾಂತಿನಗರ, ವಿನಿತಾ ತಂಗಚ್ಚನ್ ಶಿರಾಡಿ, ಮೈತ್ರಿ ಕೊಣಾಜೆ, ಜಯಂತಿ ನಾಯ್ಕ್ ಆಲಂತಾಯ, ಮೇಘನಾ ನೆಲ್ಯಾಡಿ, ಕುಸುಮ ನೆಲ್ಯಾಡಿ, ಸವಿತ ಕೌಕ್ರಾಡಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಪ್ರವರ್ತಕರಾದ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್‌ರವರು ಸ್ವಾಗತಿಸಿ, ನೂತನ ಸಂಘದ ಧ್ಯೇಯೋದ್ದೇಶಗಳನ್ನು ಹಾಗೂ ಸಹಕಾರ ಸಂಘದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

Leave a Reply

error: Content is protected !!