ಬೆಳ್ಳಾರೆ: ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದು ಮನೆ ಯಜಮಾನ ಜೀವಂತ ದಹನ

ಶೇರ್ ಮಾಡಿ

ನೇಸರ ಆ.07: ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಜೀವಂತ ದಹನವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಆ.07ರ ಬೆಳಿಗ್ಗೆ ಸಂಭವಿಸಿದೆ.

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪರ್ಲಿಕಜೆ ಸುಧಾಕರ(47) ದುರ್ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿ. ಇಂದು ಬೆಳಿಗ್ಗೆ ಸುಧಾಕರರು ಮನೆಯಲ್ಲಿ ಮಲಗಿದ್ದು, ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಈ ಹೊತ್ತಿನಲ್ಲಿ ಬೆಂಕಿ ಮನೆಯ ಒಂದು ಪಾರ್ಶ್ವವನ್ನು ಸುಟ್ಟು ಹಾಕಿತ್ತು.

ಸುಧಾಕರರು ಸ್ವಲ್ಪ ಅಸೌಖ್ಯಕ್ಕೀಡಾಗಿರುವ ಹಿನ್ನಲೆಯಲ್ಲಿ ಅವರಿಗೆ ಹೊರಗೆ ಓಡಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿಯೇ ಬೆಂಕಿಯಲ್ಲಿ ದಹಿಸಲ್ಪಟ್ಟು ಸಾವನ್ನಪ್ಪಿದರೆಂದು ತಿಳಿದು ಬಂದಿದೆ. ಮನೆಯೊಳಗೆ ಉರಿಸಿದ್ದ ದೀಪದಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ.

See also  ನಿದ್ರಾವಸ್ಥೆಯಲ್ಲಿ ಮಲಗಿದ ಕೌಕ್ರಾಡಿ ಪಂಚಾಯತ್ : ಗಬ್ಬೆದ್ದು ನಾರುತ್ತಿದ್ದರೂ ಕ್ಯಾರೆ ಎನ್ನದ ಪಂ.ಅ.ಅಧಿಕಾರಿ, ಜನಪ್ರತಿನಿಧಿಗಳು

Leave a Reply

Your email address will not be published. Required fields are marked *

error: Content is protected !!