ಕಡಬ: ಮರದ ಕೊಂಬೆ ಕಡಿಯುತ್ತಿದ್ದ ವ್ಯಕ್ತಿ ವಿದ್ಯುತ್ ತಂತಿ ತಗುಲಿ ಸಾವು

ಶೇರ್ ಮಾಡಿ

ನೇಸರ ಸೆ.07: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಕುಂತೂರು ಅನ್ನಡ್ಕದಲ್ಲಿ ಬುಧವಾರ ನಡೆದಿದೆ.
ಕುಂತೂರು ಅನ್ನಡ್ಕ ಕಾಲಾಯಿಲ್ ನಿವಾಸಿ ಮನೋಜ್(43) ಮೃತಪಟ್ಟವರು.ಮನೋಜ್ ಅವರು ಮರದ ಕೊಂಬೆ ಕಡಿಯುವಾಗ 33 ಕೆವಿ ವಿದ್ಯು ತ್ ತಂತಿ ತಾಗಿ ಈ ಘಟನೆ ಸಂಭವಿಸಿದೆ. ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು. ಬಳಿಕ ಸ್ಥಳಕ್ಕೆ ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.

Leave a Reply

error: Content is protected !!