
ನೇಸರ ಸೆ.12: ಸರಕಾರ ಮತ್ತು ಹಿರಿಯ ಅಧಿಕಾರಿಗಳು ಎಂಡೋ ಪೀಡಿತರಿಗೆ ನೀಡಿದ ಭರವಸೆಗಳು ಈಡೇರದೆ ಎರಡು ವರ್ಷಗಳು ಸಂದಿದ್ದು, ಈ ಬಗ್ಗೆ ಸಮಾಲೋಚನೆಗಾಗಿ ಸೆಪ್ಟೆಂಬರ್ 11ರಂದು ಎಂಡೋ ಸಂತ್ರಸ್ತರ ಹೋರಾಟ ಸಮಿತಿಯಿಂದ ಉಪ್ಪಿನಂಗಡಿಯ ಸಮಾಲೋಚನ ಸಭೆಯನ್ನು ಕರೆಯಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ತುಕ್ರಪ್ಪ ಶೆಟ್ಟಿ ನೂಜಿ, ಇವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮಾನವ ಹಕ್ಕು ಹಿತರಕ್ಷಣಾ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರಾದ ಸಂಜೀವ ಕಬಕ, ಜಿಲ್ಲಾ ಅಂಗವಿಕಲ ಮಂಡಲ ಅಧ್ಯಕ್ಷ ಶಿವಪ್ಪ ರಾಥೋಡ್ ಉಪಸ್ಥಿತರಿದ್ದರು.

ಎಂಡೋ ಸಂತ್ರಸ್ತರ ಪರವಾಗಿ ಶ್ರಮಿಸುತ್ತಿರುವ ಸಂಜೀವ ಕಬಕ, ತುಕ್ರಪ್ಪ ಶೆಟ್ಟಿ ನೂಜೆ ಸಲಹೆ ಸೂಚನೆಗಳನ್ನು ನೀಡಿದರು. ಸಂತ್ರಸ್ತರ ಪರವಾಗಿ ಅವ್ವಮ್ಮ, ಜೋಯಿ ಜೋಸೆಫ್, ಜಲಜಾಕ್ಷಿ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.
ಸಮಾಲೋಚನ ಸಭಾ ನಿರ್ಣಯಗಳು :
1.ಸೆಪ್ಟೆಂಬರ್ 20ರಿಂದ 30 ರವರೆಗೆ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ್ಯಾಂತ ಪತ್ರ ಚಳುವಳಿ. 2. ಅಕ್ಟೋಬರ್ 2ರಿಂದ ಬೆಂಗಳೂರು ವಿಧಾನ ಸೌಧಕ್ಕೆ ಎಂಡೋ ಸಂತ್ರಸ್ತರ ಪಾದಯಾತ್ರೆ. 3. ಈಗಿರುವ 4000 ಪಿಂಚಣಿ ಯನ್ನು 10000ಕ್ಕೆ ಏರಿಸಬೇಕು 4. ನೀಲಿ ಸ್ಮಾರ್ಟ್ ಕಾರ್ಡ್ ಹೊಂದಿರುವ ಸಂತ್ರಸ್ತರಿಗೆ ಕೂಡ ಪಿಂಚಣಿ ಸೌಲಭ್ಯ ನೀಡಬೇಕು. 5. 90% ಎಂಡೋ ಸಂತ್ರಸ್ತರಿಗೆ ಇನ್ನೂ ಯುಡಿಐಡಿ ಕಾರ್ಡ್ ಸಿಗದಿರುವುದರಿಂದ ತಕ್ಷಣವೇ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು. 6.ಎಂಡೋ ಸಂತ್ರಸ್ತರಿಗೆ ಪೌಷ್ಟಿಕ ಆಹಾರ ನೀಡಬೇಕು. 7. ಪುತ್ತೂರು ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ ಗಳಲ್ಲಿ ಎಂಡೋ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಸೌಲಭ್ಯ ನೀಡಬೇಕು. 8.ಎಂಡೋ ಸಂತ್ರಸ್ತರ ಸಮಸ್ಯೆ ಗಳನ್ನು ಆಲಿಸಲು ಇರಬೇಕಾದ ಕಮಿಷನರ್ ಹುದ್ದೆ ತಕ್ಷಣವೇ ಭರ್ತಿ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ಜನಾರ್ಧನ ಗೋಳಿತೊಟ್ಟು ಸ್ವಾಗತಿಸಿ, ಎಂಡೋ ಹೋರಾಟ ಸಮಿತಿಯ ಶ್ರೀಧರ ಗೌಡ ಕೆಂಗುಡೇಲು ಪ್ರಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.




