ಗೋಳಿತ್ತೊಟ್ಟು ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ಸದಸ್ಯ ಮಹೇಶ್ ಡೆಬ್ಬೆಲಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

ಶೇರ್ ಮಾಡಿ

ನೇಸರ ಸೆ.12: ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಳಿತ್ತೊಟ್ಟು ಘಟಕ, ಉಪ್ಪಿನಂಗಡಿ ಪ್ರಖಂಡ ವತಿಯಿಂದ ದಿನಾಂಕ 11-09-2022 ನೇ ಆದಿತ್ಯವಾರ ಎ.ಜೆ.ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಗೋಳಿತ್ತೊಟ್ಟು ಘಟಕದ ಸಕ್ರಿಯ ಸದಸ್ಯರಾದ ಮಹೇಶ್ ಡೆಬ್ಬೆಲಿ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ ಶ್ರಿ ಸಿದ್ದಿವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕರಾದ ರಘು ಸಕಲೇಶಪುರ ಶಿಬಿರ ಉದ್ಘಾಟಿಸಿ ರಕ್ತದಾನ ಶ್ರೇಷ್ಠದಾನ, ಬಜರಂಗದಳದ ಜೀವ ಉಳಿಸುವ ಸೇವಾ ಕಾರ್ಯ ಶ್ಲಾಘನೀಯ. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಬಜರಂಗದಳ ಹಿಂದೂ ಸಮಾಜದ ಸೇವೆಗೆ ಸುರಕ್ಷತೆಗೆ ಬದ್ದವಾಗಿದೆ ಎಂದರು
.

ಅಥಿತಿಗಳಾಗಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಭಾಸ್ಕರ ಧರ್ಮಸ್ಥಳ ಕಾರ್ಯಕ್ರಮಕ್ಕೆ ಸಂದರ್ಬೊಚಿತವಾಗಿ ಶುಭ ಹಾರೈಸಿದರು
ಎ.ಜೆ.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕರಾದ ಗೋಪಾಲಕೃಷ್ಣರವರು ಅಸ್ಪತ್ರೆಗಳಿಗೆ ಯಾವುದೆ ಸಂದರ್ಬದಲ್ಲಿಯೂ ರಕ್ತದ ಕೊರತೆ ಉಂಟಾಗದಂತೆ ಕಾರ್ಯ ನಿರ್ವಹಿಸುವ ಬಜರಂಗದಳದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿಗಳಾದ ನವೀನ್ ನೆರಿಯ ರವರು ರಕ್ತದಾನ ಮಾಡುವ ಮುಖಾಂತರ ರಕ್ತದಾನ. ಶಿಬಿರಕ್ಕೆ ಚಾಲನೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅದ್ಯಕ್ಷರಾದ ಸುದರ್ಶನ್, ಶ್ರೀಸಿದ್ದಿ ವಿನಾಯಕ ಸೇವಾ ಸಮಿತಿ ಅದ್ಯಕ್ಷರಾದ ಬಾಲಕೃಷ್ಣ ಅಲೆಕ್ಕಿ, ಪ್ರಗತಿಪರ ಕೃಷಿಕರಾದ ವೆಂಕಟ್ರಮಣ ಸುಲ್ತಾಜೆಯವರು ಬಾಗವಹಿಸಿದ್ದರು
ದಿ.ಮಹೇಶ್ ಡೆಬ್ಬೆಲಿಯವರ ತಂದೆ ನೊಣಯ್ಯ ಡೆಬ್ಬೆಲಿ, ಸ್ಥಾನಿಯ ಘಟಕದ ಅದ್ಯಕ್ಷರಾದ ಡೀಕಯ್ಯ ಪೂಜಾರಿ, ಗೋಳಿತ್ತೊಟ್ಟು ಬಜರಂಗದಳ ಸಂಚಾಲಕ ರೋಹಿನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಸಂಚಾಲಕ ಮೂಲಚಂದ್ರ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಭಾಷ್ ಪುರ ಕಾರ್ಯಕ್ರಮ ನಿರ್ವಹಿಸಿ, ನಾಗೇಶ್ ಪೆರಣ ವಂದನಾರ್ಪಣೆ ಮಾಡಿದರು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ಪದಾದಿಕಾರಿಗಳು, ಅನ್ಯನ್ಯ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದು ಒಟ್ಟು ಎಂಬತ್ತಮೂರು ರಕ್ತದಾನಿಗಳು ಶಿಬಿರದಲ್ಲಿ ರಕ್ತದಾನ ಮಾಡಿದರು.

Leave a Reply

error: Content is protected !!