ಜೇಸಿಐ ಉಡುಪಿ ಸಿಟಿ ವತಿಯಿಂದ ನಮಸ್ತೆ ಜೇಸಿ ಸಪ್ತಾಹ 5ನೇ ದಿನದ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಸೆ.13: ಜೇಸಿಐ ಉಡುಪಿ ಸಿಟಿ ವತಿಯಿಂದ ಜೇಸಿಐ ಭಾರತ 2022ರ ಜೇಸಿಐ ಸಪ್ತಾಹ “ನಮಸ್ತೆ” 5ನೇ ದಿನದ ಕಾರ್ಯಕ್ರಮವು ಮಿಷನ್ ಕಂಪೌಂಡ್ ಬಳಿಯ ಸಿಎಸ್ಐ ಮಕ್ಕಳ ವಸತಿಗ್ರಹ ಸಭಾಭವನದಲ್ಲಿ ಜರುಗಿತು۔
ಉದ್ಘಾಟಕರಾಗಿ ವಲಯ XVರ ವಲಯ ಮಹಿಳಾ ಜೆಸಿ ನಿರ್ದೇಶಕಿ ಅಕ್ಷತಾ ಗಿರೀಶ್ ನೆರವೇರಿಸಿ ಮಕ್ಕಳಿಗೆ ಲೇಖನಿಗಳನ್ನು ನೀಡಿ ಶುಭ ಹಾರೈಸಿದರು. ಸಂಪಂನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಉದಯಕುಮಾರ್ ಮಕ್ಕಳ ಹಕ್ಕು ಮತ್ತು ರಕ್ಷಣಾ ಕಾನೂನು ಬಗ್ಗೆ ಮಾತನಾಡಿದರು. ಪೂರ್ವಧ್ಯಕ್ಷ ವಲಯ ತರಬೇತಿದಾರ ಜೇಸಿ.ಮಹಮದ್ ರಫೀಕ ಖಾನ್ ಸಾಹೇಬ್ ಪ್ಲಾಸ್ಟಿಕ್ ಬಳಕೆ ತಡೆ ಕುರಿತು ಮಾಹಿತಿ ನೀಡಿದರು۔
ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷ ಜೇಸಿ ಡಾ.ವಿಜಯ್ ನೆಗಳೂರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಜೇಸಿ ಡಾ.ಚಿತ್ರಾ ನೆಗಳೂರು, ಪೂರ್ವಧ್ಯಕ್ಷ ಜೇಸಿ.ಜಗದೀಶ್ ಶೆಟ್ಟಿ، ಸಿಎಸ್ಐ ವಸತಿ ಶಾಲೆಯ ಇಂಚಾರ್ಜ್ ಆಗಿರುವ ಜೊಯಲ್ ಉಪಸ್ಥಿತರಿದ್ದರು.
ಜೇಸಿ.HGF ಉದಯ್ ನಾಯ್ಕ್ ವಲಯ ಸಂಯೋಜಕರು ಎಚ್ ಜಿ ಎಫ್ ಸ್ಕಾಲರ್ಶಿಪ್ ವಿಭಾಗ ವಂದಿಸಿದರು. ಜೇಸಿ.ರಾಘವೇಂದ್ರ ಪ್ರಭು ಕರ್ವಾಲು, ಜೂನಿಯರ್ ಜೇಸಿ ವಲಯ ನಿರ್ದೇಶಕರು ZD ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!