ನೆಲ್ಯಾಡಿ ಬೆಥನಿ ಐಟಿಐ ಗೆ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

ಶೇರ್ ಮಾಡಿ

ನೇಸರ ಸೆ.13: ನೆಲ್ಯಾಡಿ ಜುಲೈ 2022 ನೇ ಸಾಲಿನ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಬೆಥನಿ ಐಟಿಐ ನೆಲ್ಯಾಡಿಯ ಕೋಪಾ, ವೆಲ್ಡರ್, ಎಲೆಕ್ಟ್ರೀಶಿಯನ್, ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದಿಂದ ಅಂತಿಮ ಪರೀಕ್ಷೆಗೆ 72 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿ ಸಂಸ್ಥೆಗೆ ಶೇ.100 ಫಲಿತಾಂಶ ತಂದಿರುತ್ತಾರೆ.
ಕೋಪಾ ವಿಭಾಗದ ರಾಜೇಶ್ ಬಿ., ವೆಲ್ಡರ್ ವಿಭಾಗದ ಸನ್ನಿಧಿ ಎನ್, ಎಲೆಕ್ಟ್ರೀಶಿಯನ್ ವಿಭಾಗದ ನಿಧೀಶ್ ಎಂ.ಪಿ., ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್ ವಿಭಾಗದ ಸ್ವಸ್ಥಿಕ್ ಕೆ.ಎಸ್., ಫಿಟ್ಟರ್ ವಿಭಾಗದ ಹರ್ಷಿತ್ ಎನ್., ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದ ರಂಜನ್ ಪಿ.ಬಿ. ತಮ್ಮ ತಮ್ಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ಧೇಶಕರಾದ ರೆ|ಫಾ| ಮೆಲ್ವಿನ್ ಮ್ಯಾಥ್ಯು ಒಐಸಿ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕ ವೃಂದದವರನ್ನು ಅಭಿನಂದಿಸಿರುತ್ತಾರೆ. ಹಾಗೆಯೇ 2021-22 ನೇ ಪ್ರಥಮ ವರ್ಷದ ಪರೀಕ್ಷೆ ಬರೆದ 70 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 98.57 ಶೇಕಡ ಫಲಿತಾಂಶ ಬಂದಿರುತ್ತದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

Leave a Reply

error: Content is protected !!