ಬಿದ್ದು ಸಿಕ್ಕಿದ ಚಿನ್ನದ ಸರ ವಾರೀಸುದಾರರಿಗೆ ಹಸ್ತಾಂತರ

ಶೇರ್ ಮಾಡಿ

ನೇಸರ ಸೆ.14: ಬೆಳ್ತಂಗಡಿಯ ನ್ಯಾಯವಾದಿಯೊಬ್ಬರು ತಿಂಗಳ ಹಿಂದೆ ಕಳೆದುಕೊಂಡಿದ್ದ ಚಿನ್ನದ ಸರವನ್ನು ಮರಳಿಸುವ ಮೂಲಕ ಬೆಳ್ತಂಗಡಿಯ ಉದ್ಯಮಿ‌ ಹಾಗೂ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಬಶೀರ್ ವಗ್ಗ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
ನ್ಯಾಯವಾದಿ ತಿಂಗಳ ಹಿಂದೆ 1.5 ಲಕ್ಷ ರೂ. ಮೌಲ್ಯದ ತನ್ನ ಚಿನ್ನದ ಸರ ಕಳೆದುಕೊಂಡಿದ್ದರು‌. ಹಲವೆಡೆ ಹುಡುಕಾಟ ನಡೆಸಿದ್ದರೂ ಸರ ಸಿಕ್ಕಿರಲಿಲ್ಲ.ಆದರೆ ಈ ಸರ ಮುಹಮ್ಮದ್ ಬಶೀರ್ ಅವರಿಗೆ ಸಿಕ್ಕಿತ್ತು.‌ ಈ ಸರ ಯಾರದ್ದೆಂದು ತಿಳಿಯದೇ ಇದ್ದು, ಮಾಹಿತಿ ಲಭಿಸದ್ದರಿಂದ ಬಶೀರ್ ಅವರೇ ಸ್ವಂತ ಖರ್ಚಿನಲ್ಲಿ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದನ್ನು ಅರಿತ ನ್ಯಾಯವಾದಿಗೆ ಅದು ಸರ ತನ್ನದೇ ಎಂದು ರುಜುವಾತಾಯಿತು.
ಆ ಹಿನ್ನೆಲೆಯಲ್ಲಿ ಮುಹಮ್ಮದ್ ಬಶೀರ್ ಅವರು ನ್ಯಾಯವಾದಿಗೆ ಚಿನ್ನದ ಸರ ಹಸ್ತಾಂತರಿಸಿದರು.
ಬಶೀರ್ ಉಜಿರೆಯಲ್ಲಿ ಇ.ಕೆ ಬೀಡೀಸ್ ಉದ್ಯಮ ನಡೆಸುತ್ತಿದ್ದು, ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷರಾಗಿ, ಬೆಳ್ತಂಗಡಿ ದಾರುಸ್ಸಲಾಂ ದ‌ಅವಾ ಸೆಂಟರ್ ನ ಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ.

Leave a Reply

error: Content is protected !!