ಉಪ್ಪಿನಂಗಡಿ:ಜೇಸಿ ಸಪ್ತಾಹ ಸ್ಪಂದನ 2022; ಜಲ-ವನ ದಿನಾಚರಣೆ

ಶೇರ್ ಮಾಡಿ

ನೇಸರ ಸೆ.14: ಉಪ್ಪಿನಂಗಡಿ:ಜೇಸಿಐ ಉಪ್ಪಿನಂಗಡಿ ಘಟಕ, ಯುವ ಜೇಸಿ ವಿಭಾಗ ಹಾಗೂ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪಿನಂಗಡಿ ಇದರ 44 ನೇ ವರ್ಷದ ಜೇಸಿ ಸಪ್ತಾಹ ಸ್ಪಂದನ ಮತ್ತು ಜೇಸಿಐ ಭಾರತದ ನಮಸ್ತೆ 2022 ಕಾರ್ಯಕ್ರಮ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಯ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಕಾಂಚನದಲ್ಲಿ ಜಲ -ವನ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ ಉಡುಪ ದೀಪ ಬೆಳಗಿಸಿ ಉದ್ಘಾಟಿಸಿದರು.

ಪೂರ್ವಾಧ್ಯಕ್ಷ ಜೇಸಿ ಕೇಶವ ರಂಗಾಜೆ, ವಿಕ್ರಂ ಯುವಕ ಮಂಡಲ ಅಧ್ಯಕ್ಷ ಜೇಸಿ ಅನಿಲ್ ಪಿಂಟೊ ಪುಯಿಲ, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ವಿಶ್ವನಾಥ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಉಪಾಧ್ಯಕ್ಷರಾದ ಜೇಸಿ ಅವನೀಶ್ ಪಿ ಅಧ್ಯಕ್ಷತೆ ವಹಿಸಿದ್ದರು.

ಮಳೆನೀರು ಕೊಯ್ಲು ಕುರಿತು ತರಬೇತಿಯನ್ನು ಉಪನ್ಯಾಸಕ ಜೇಸಿ ಅವನೀಶ್ ನೀಡಿದರು. ಮರಗಿಡಗಳ ಮಹತ್ವ ತಿಳಿಸಿ, ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.ಪರಿಸರ ದಿನಾಚರಣೆ ಸಂದರ್ಭದಲ್ಲಿ ವಿತರಿಸಿದ ಗಿಡಗಳನ್ನು ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಜೇಸಿ ದಿವಾಕರ ಶಾಂತಿನಗರ, ಜೇಸಿ ಮಹೇಶ್, ಜೇಸಿ ಅನಿಲ್ ಪಿಂಟೊ ಪುಯಿಲ, ಜೇಸಿ ನಾಗೇಶ ಬಿದಿರಾಡಿ ಸಹಕರಿಸಿದರು.

See also  ಮುಗೇರಡ್ಕ ಮೊಗ್ರು ಶ್ರೀ ದುರ್ಗಾನುಗ್ರಹ ಭಜನಾ ಮಂದಿರ: ಡಿ.31 ರಿಂದ ಜ.01 ರವರೆಗೆ ನವೀಕೃತ ಮಂದಿರದ ಪ್ರವೇಶೋತ್ಸವ

Leave a Reply

Your email address will not be published. Required fields are marked *

error: Content is protected !!