ನೆಲ್ಯಾಡಿ ಜೇಸಿಐ ನ 39ನೇ ವರ್ಷದ ಜೇಸಿ ಸಪ್ತಾಹ ; ವಲಯಾಧ್ಯಕ್ಷರ ಅಧಿಕೃತ ಭೇಟಿ

ಶೇರ್ ಮಾಡಿ

ನೇಸರ ಸೆ.14: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ, ಜೂನಿಯರ್ ಜೇಸಿ ವಿಂಗ್, ಇದರ 39ನೇ ವರ್ಷದ ಜೇಸಿ ಸಪ್ತಾಹ “ನಮಸ್ತೆ-2022” ಅಂಗವಾಗಿ ಸೆ. 13ರಂದು ವಲಯಾಧ್ಯಕ್ಷರ ಅಧಿಕೃತ ಭೇಟಿ ಮತ್ತು ಆಶ್ರಮ ಭೇಟಿ ಹಾಗೂ ಆಶ್ರಮವಾಸಿಗಳಿಗೆ ಹಣ್ಣು ಹಂಪಲು ವಿತರಣೆ, ದತ್ತಿ ನಿಧಿ ವಿತರಣೆ ಕಾರ್ಯಕ್ರಮ ನಡೆಯಿತು.

ಜೇಸಿ HGF ಜಯಂತಿ ಬಿ.ಎಂ ಇವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಸೆನೆಟರ್.ರೋಯನ್ ಉದಯ ಕ್ರಾಸ್ತಾ ವಲಯಾಧ್ಯಕ್ಷರು, ಜೇಸಿ.HGF ಮರಿಯ ಜ್ಯೋತಿ ರೋಡ್ರಿಗಸ್ ವಲಯ 15ರ ಪ್ರಥಮ ಮಹಿಳೆ, ಸೆನೆಟರ್.ಸ್ವಾತಿ ಜೆ ರೈ ವಲಯ ಉಪಾಧ್ಯಕ್ಷರು, ಸೀನಿಯರ್.ಅಬ್ರಹಾಂ ವರ್ಗಿಸ್ ಸಂಚಾಲಕರು ಸಂತ ಜಾರ್ಜ್ ವಿದ್ಯಾಸಂಸ್ಥೆ, ಜೆಎಫ್‍ಡಿ.ಪುರುಷೋತ್ತಮ ಶೆಟ್ಟಿ ವಲಯ ನಿರ್ದೇಶಕರು, ಸೀನಿಯರ್. ಡಾ.ಸದಾನಂದ ಕುಂದರ್, ಸರಿತ ಜೋಸೆಫ್ ಪ್ರಶಾಂತ್ ನಿವಾಸ, ಗಿರೀಶ್ ನಿಕಟ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

ವಲಯಾಧ್ಯಕ್ಷರನ್ನು ಸಂಭ್ರಮದಿಂದ ಸಂತ ಜಾರ್ಜ್ ವಿದ್ಯಾ ಸಂಸ್ಥೆ ಯಲ್ಲಿ ಸ್ವಾಗತಿಸಿ. ಬಳಿಕ ಸಂತ ಜೋಸೆಫ್ ಪ್ರಶಾಂತ ನಿವಾಸಕ್ಕೆ ಭೇಟಿ ನೀಡಿ ಅಲ್ಲಿರುವ ಆಶ್ರಮವಾಸಿಗಳಿಗೆ ಹಣ್ಣು ಹಂಪಲು ವಿತರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳಿಗೆ ಭೋಜನ ವ್ಯವಸ್ಥೆ ಮಾಡಿದ ಅಬ್ರಹಾಂ ವರ್ಗಿಸ್ ರವರು ಮಾತನಾಡುತ್ತ “ಚಾರಿಟಿ ಜೇಸಿಯ ದ್ಯೇಯವಲ್ಲವಾದರೂ, ಸಾಮಾಜಿಕವಾಗಿ ಬೆರೆಯಲು ಮಾನವೀಯ ಮೌಲ್ಯಗಳ ಪ್ರತಿಪಾದನೆಗೆ ಇಂತಹ ಕೆಲಸಗಳು ನಮಗೆ ಹೆಮ್ಮೆ ತರುವಂತಹದು, ಇದರಲ್ಲಿ ನಿಜವಾದ ಭಗವಂತನನ್ನು ಕಾಣಬಹುದು, ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬದಂತಹ ಆಚರಣೆಗಳನ್ನು ಆಶ್ರಮದಂತಹ ಪರಿಸರಗಳಲ್ಲಿ ಮಾಡುದರಿಂದ ನಾವು ಭಗವಂತನ ಕೃಪೆಯನ್ನು ಹೊಂದಬಹುದು ಎಂದರು.

ವಲಯಧ್ಯಕ್ಷರಾಗಿ ಭೇಟಿ ನೀಡಿದ ಸೆನೆಟರ್.ರೋಯನ್ ಉದಯ ಕ್ರಾಸ್ತಾ ರನ್ನು ನೆಲ್ಯಾಡಿ ಜೇಸಿಐ ವತಿಯಿಂದ ಜೇಸಿಐನ ಅಧ್ಯಕ್ಷರಾದ ಜಯಂತಿ ಬಿ ಎಂ ರವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನೆಲ್ಯಾಡಿ ಜೇಸಿ ಅತ್ಯಂತ ಹಳೆಯ ಮತ್ತು ಪ್ರಬಲ ಸಂಘಟನೆ, ಇಲ್ಲಿ ಪೂರ್ವಾಧ್ಯಕ್ಷರುಗಳು ಜೇಸಿಯ ಆಧಾರಸ್ತಂಭಗಳು, ಇವರ ಸಲಹೆ ಪ್ರೋತ್ಸಾಹಗಳಿಂದ ನೆಲ್ಯಾಡಿ ಜೇಸಿ ವಲಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಪ್ರಥಮ ಮಹಿಳೆ ಮರಿಯ ರೋಡ್ರಿಗಸ್, ವಲಯ ಉಪಾಧ್ಯಕ್ಷೆ ಸ್ವಾತಿ ಜೆ ರೈ, ಪುರುಷೋತ್ತಮ ಶೆಟ್ಟಿ, ಇವರನ್ನು ಸನ್ಮಾನಿಸಲಾಯಿತು.
ಸ.ಹಿ.ಪ್ರಾ.ಶಾಲೆ ನೆಲ್ಯಾಡಿಗೆ ದತ್ತು ನಿಧಿಯನ್ನು ನೀಡಲಾಯಿತು. ಆಶ್ರಮವಾಸಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಜೇಸಿ.ಗಣೇಶ್ ಕೆ ರಶ್ಮಿ ಅತಿಥಿಗಳನ್ನು ವೇದಿಕೆ ಆಹ್ವಾನಿಸಿದರು. ಜಾಹ್ನವಿ ಪುರಂದರ ಜೇಸಿ ವಾಣಿ ವಾಚಿಸಿದರು, ಜೇಸಿ ಸುಚಿತ್ರ ಬಂಟ್ರಿಯಲ್ ಜೇಸಿ ಸಪ್ತಾಹದ ವರದಿ ವಾಚಿಸಿದರು. ಶಿವಪ್ರಸಾದ್ ಮತ್ತು ಜಯಾನಂದ ಬಂಟ್ರಿಯಲ್ ಸಹಕರಿಸಿದರು.

Leave a Reply

error: Content is protected !!