ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಅಭಿಯಂತರರ ದಿನ ಆಚರಣೆ

ಶೇರ್ ಮಾಡಿ

ನೇಸರ ಸೆ.16: ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಅಭಿಯಂತರರ ದಿನ (ಇಂಜಿನಿಯರ್ಸ್ ಡೇ ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸರ್ ಎಮ್ ವಿಶ್ವೇಶ್ವರಯ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜ್ಯ ವಿಶ್ವೇಶ್ವರಯ್ಯನವರ ಜೀವನದ ಸಾಧನೆಯನ್ನು ಉಪನ್ಯಾಸ ಮೂಲಕ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ತಿಳಿಸಿದರು. ಬಳಿಕ ಸುನಿಲ್ ಜೋಸೆಫ್ ಕಿರಿಯ ತರಬೇತಿ ಅಧಿಕಾರಿ ನೇತೃತ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಯಶೋಗಾಥೆಯ ವಿಡಿಯೋ ಪ್ರದರ್ಶನ ಮಾಡಲಾಯಿತು. ಸಂಸ್ಥೆಯ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ತೋಮಸ್ ಬಿಜಿಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್, ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಸ್ವಾಗತ ಮತ್ತು ನಿರೂಪಣೆಯನ್ನು ಸುಬ್ರಾಯ ನಾಯಕ್, ಧನ್ಯವಾದವನ್ನು ಜೋನ್, ತರಬೇತಿ ಅಧಿಕಾರಿ ನಡೆಸಿಕೊಟ್ಟರು. ಸಂಸ್ಥೆಯ ಸಾಂಸ್ಕೃತಿಕ ವಿಭಾಗವು ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಹಮ್ಮಿಗೊಂಡಿತ್ತು.

See also  ಕೃಷಿ ತೋಟಕ್ಕೆ ಹೋಗಲು ನವೀನ ಮಾದರಿಯ ಹೈಟೆಕ್ ಸೇತುವೆ

Leave a Reply

Your email address will not be published. Required fields are marked *

error: Content is protected !!