ಭಾರತವನ್ನು ಜಗತ್ತಿನ ಅತ್ಯಂತ ಎತ್ತರಕ್ಕೆ ಕೊಂಡೊಯ್ದ ದೇಶದ ಆದರ್ಶ ಪುರುಷ ಪ್ರಧಾನಿ ನರೇಂದ್ರ ಮೋದಿ – ನಳಿನ್ ಕುಮಾರ್ ಕಟೀಲ್

ಶೇರ್ ಮಾಡಿ

ನೇಸರ ಸೆ.17: ಕಳೆದ ಎಂಟು ವರ್ಷಗಳಿದ ವಿಶ್ವದ ವಿಶ್ವಾಸಗಳಿಸಿ ಭಾರತವನ್ನು ಜಗತ್ತಿನ ಅತ್ಯಂತ ಎತ್ತರಕ್ಕೆ ಕೊಂಡೊಯ್ದ ದೇಶದ ಆದರ್ಶ ಪುರುಷರಾದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಜಗತ್ತಿನ ದೇಶಗಳು ಭಾರತವನ್ನು ತಿರುಗಿ ನೋಡುವಂತಾಗಿದೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಸಾಮನ್ಯ ಕಾರ್ಯಕರ್ತನಾಗಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕನಾಗಿ ದೇಶದ ಉದ್ದಗಲದಲ್ಲಿ ಅಧ್ಯಯನ ಶೀಲ ಪ್ರವಾಸ ಮಾಡಿದ ಪರಿಣಾಮ ಪ್ರಧಾನಿಯವರಿಂದ ಪ್ರಾಮಾಣಿಕ ಆಡಳಿತ ಈ ದೇಶಕ್ಕೆ ದೊರೆತಿದೆ, ಮುಖ್ಯ ಮಂತ್ರಿಯಾಗಿ ಗುಜರಾತನ್ನು ದೇಶದ ನಂಬರ್‌ವನ್ ರಾಜ್ಯ ಮಾಡಿ, ದೇಶದ ಜನ ಅವರನ್ನು ಸ್ವೀಕರಾ ಮಾಡುವಂತಾಯಿತು, ಇದೀಗ ದೇಶದ ಪ್ರಧಾನಿಯಾಗಿ ಭಾರತವನ್ನು ಜಗತ್‌ವಂದ್ಯಾ ಮಾಡಿದ್ದಾರೆ. ಅನೇಕ ಯೋಜನೆಗಳನ್ನು ಜಾರಿ ಮಾಡಿ ಸಾಮಾನ್ಯ ಜನರ ಬದುಕು ಹಸನು ಮಾಡುವ ಮೂಲಕ ರಾಷ್ಟ್ರದಲ್ಲಿ ಪರಿವರ್ತನೆಯನ್ನು ತಂದು ಸದೃಢ ರಾಷ್ಟ್ರ ನಿರ್ಮಾನ ಮಾಡಿರುವ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಸೇವಾಹಿ ಸಪ್ತಾಹ ಮೂಲಕ ಬಡವರ ಕಣ್ಣು ಒರೆಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತಾನಾಡಿ ಪಕ್ಷದ ಕಾರ್ಯಕರ್ತರು ಪ್ರಧಾನಿಯವರ ಜನ್ಮದಿನವನ್ನು ಸೇವಾಹಿ ಸಪ್ತಾಹದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಸುಳ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ, ಇಂತಹ ಕಾರ್ಯ ಮಾಡುವುದರಿಮದ ಜನರ ವಿಶ್ವಾಸ ಉಳಿಸಿಕೊಳ್ಳುವಂತಾಗಿದೆ ಎಂದರು.
ಸುಳ್ಯ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕೃಷ್ಣ ಎಂ.ಆರ್ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಭೋದ್ ಶೆಟ್ಟಿ ಮೆನಾಲ ಉಪಸ್ಥಿರಿದ್ದರು.

ಈ ಸಂದರ್ಭದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಅವರನ್ನು ಗೌರವಿಸಲಾಯಿತು. ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಸುನಿಲ್ ಕೇರ್ಪಳ ಸ್ವಾಗತಿಸಿದರು. ಸುಳ್ಯಮಂಡಲ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ದಿಲೀಪ್ ಉಪ್ಪಳಿಕೆ ವಂದಿಸಿದರು. ಅಲೆಟ್ಟಿ ಮಹಾಶಕ್ತಿಕೇಂದ್ರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಕೊಲ್ಲಾರ್‌ಮೂಲೆ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಯುವ ಮೋರ್ಚಾದ ಒಟ್ಟು 89 ಕಾರ್ಯಕರ್ತರು ರಕ್ತದಾನ ಮಾಡಿದರು.

See also  ಹಸಿ ಮೀನು ಮಾರಾಟ ಟೆಂಡರ್ ಪ್ರಕ್ರಿಯೆ ; ಅರಸಿನಮಕ್ಕಿ ಪಂಚಾಯತ್ ಅಧ್ಯಕ್ಷರ ನಡೆಗೆ ಬಿಡ್‌ದಾರರ ಆಕ್ಷೇಪ

Leave a Reply

Your email address will not be published. Required fields are marked *

error: Content is protected !!