ಬೆಳ್ತಂಗಡಿ: ವನ್ಯಜೀವಿ ಸಪ್ತಾಹ: ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು

ಶೇರ್ ಮಾಡಿ

ನೇಸರ ಸೆ.18: 68ನೇ ವನ್ಯಜೀವಿ ಸಪ್ತಾಹ ಆಚರಣೆಯ ಪೂರ್ವಭಾವಿಯಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಾನಾ ಸ್ಪರ್ಧೆಗಳು ಬೆಳ್ತಂಗಡಿಯ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದವು.
ಶಾಲೆಯ ಮುಖ್ಯಸ್ಥ ಕ್ಲಿಫರ್ಡ್ ಸೈಮನ್ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಿಕ್ಷಣ ಇಲಾಖೆಯ ಸುಭಾಷ್ ಜಾಧವ್, ಉಪನ್ಯಾಸಕ ಗಣೇಶ್ ಭಟ್, ಬೆಳ್ತಂಗಡಿ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ರಂಜಿತ್ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಾಥಮಿಕ,ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ 200 ವಿದ್ಯಾರ್ಥಿಗಳಿಗೆ ವನ್ಯಪ್ರಾಣಿಗಳ ಚಿತ್ರ ರಚನೆ, ವನ್ಯ ಪ್ರಾಣಿಗಳನ್ನು ಗುರುತಿಸುವುದು, ರಸಪ್ರಶ್ನೆ, ಪ್ರಬಂಧ, ಭಾಷಣ ಮೊದಲಾದ ಸ್ಪರ್ಧೆಗಳು ಜರಗಿದವು. ವನ್ಯಜೀವಿ ಸಪ್ತಾಹವು ಅ.2ರಿಂದ 8ರ ತನಕ ನಡೆಯಲಿದೆ.

Leave a Reply

error: Content is protected !!