ಚಾಮುಂಡೇಶ್ವರಿ ಕ್ರೀಯೇಷನ್ ಪಡುಬೆಟ್ಟು ಇವರ “ಮರೆಯಲಾಗದ ಕ್ಷಣ” ಕಿರುಚಿತ್ರ ಬಿಡುಗಡೆ

ಶೇರ್ ಮಾಡಿ

ನೇಸರ ಸೆ.19: ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಮುಂಡೇಶ್ವರಿ ಕ್ರೀಯೇಷನ್ ಪಡುಬೆಟ್ಟು ನೆಲ್ಯಾಡಿ, ಇವರ ಕೂಡುವಿಕೆಯಿಂದ ಮರೆಯಲಾಗದ ಕ್ಷಣ ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ನೆಲ್ಯಾಡಿ ಗ್ರಾಮ ಪಂಚಾಯತ್ ನ ಸದಸ್ಯ ರವಿಪ್ರಸಾದ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಾಮುಂಡೇಶ್ವರಿ ಕ್ರಿಯೇಷನ್ ಪಡುಬೆಟ್ಟು ರವರು ನಿರ್ಮಿಸಿದ ಮರೆಯಲಾಗದ ಕ್ಷಣ ಕಿರು ಚಿತ್ರವನ್ನು ನಟ ನಿರ್ದೇಶಕ ರವಿ ರಾಮಕುಂಜ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರವಿ ರಾಮಕುಂಜ ರವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಸಾದ್ ಬೀದಿಮನೆ ವಹಿಸಿದ್ದರು. ವೇದಿಕೆಯಲ್ಲಿ ಕಿರು ಚಿತ್ರದ ನಿರ್ದೇಶಕರಾದ ಶಿವರಾಮ್ ಅಳಿಕೆ, ಸಂಕಲನಕಾರ ಪ್ರವೀಣ್ ವಿಟ್ಲ, ಸಾಹಿತ್ಯ ಸಂಭಾಷಣೆ ಬರೆದ ಅನಿಲ್ ವಡಗೇರಿ, ಮಹಾಲಿಂಗ ಮಾಸ್ತರ್, ಸಲಾಂ ಬಿಲಾಲ್, ಪುಷ್ಪ. ಗೀತಾ, ಸೇಸಪ್ಪ, ಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಹಾಗು ಧನ್ಯವಾದವನ್ನು ಕೆ.ಪಿ ಆನಂದ ಪಡುಬೆಟ್ಟು ನೆರವೇರಿಸಿದರು. ಶಂಕರ್ ಪಡುಬೆಟ್ಟು ನಿರೂಪಿಸಿದರು.

See also  ಮಂಗಳೂರು ಕ್ಯಾಂಪ್ಕೋ ಸಂಸ್ಥೆಯಿಂದ ಚಿಕಿತ್ಸೆಗೆ ಆರ್ಥಿಕ ಧನಸಹಾಯ ವಿತರಣೆ

Leave a Reply

Your email address will not be published. Required fields are marked *

error: Content is protected !!