ನೇಸರ ಸೆ.19: ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್(ರಿ) ಮತ್ತು ಸಂಟ್ ಮೇರಿಸ್ ಚರ್ಚ್ ಗುತ್ತಿಗಾರು ಸಂಯುಕ್ತವಾಗಿ ಗುತ್ತಿಗಾರು ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ 75 ನೇ ಸ್ವಾತಂತ್ರ್ಯತ್ಸವ ಪ್ರಯುಕ್ತ ಪ್ರಜಾಪ್ರಭುತ್ವ ದೇಶ, ನನ್ನ ಭಾರತ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತ್ತು. ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಭಾನುವಾರ ಗುತ್ತಿಗಾರು ಚರ್ಚಿನ ಸಭಾ ಭವನದಲ್ಲಿ ನಡಸಲಾಯಿತ್ತು.
ಗುತ್ತಿಗಾರು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ನೆಲ್ಸನ್ ಕಾಸ್ಟಲೀನೋ ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಮಾತಾಡಿದ ಅವರು ನಮ್ಮ ದೇಶ ವೈವಿದ್ಯತೆ ಯಿಂದ ಕೂಡಿದ ದೇಶ ಇಲ್ಲಿ ಎಲ್ಲರೂ ಸಾಮರಸ್ಯ ಮತ್ತು ಶಾಂತಿ ಸೌಹಾರ್ದತೆಯನ್ನು ಪಾಲನೆ ಮಾಡುವಾಗ ನಮ್ಮ ದೇಶ ಬಲಿಷ್ಠವಾಗಲಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಮಹೇಶ್ ಪುಚ್ಚಪಾಡಿ ಇವರು ಪ್ರಜಾಪ್ರಭುತ್ವ ಮೌಲ್ಯಗಳ ಹಾಗೂ ಗ್ರಾಮೀಣ ಭಾರತದ ಬಗ್ಗೆ ಮಾತನಾಡಿ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಧಾರ್ಮಿಕ ಕೇಂದ್ರಗಳ ಮೂಲಕ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ. ಗ್ರಾಮೀಣ ಭಾರತ ಸಶಕ್ತವಾಗಿಸುವುದರ ಮೂಲಕ ಭಾರತವನ್ನು ಬೆಳಸಬೇಕು ಎಂದರು.
ಗುತ್ತಿಗಾರು ಚರ್ಚಿನ ಧರ್ಮಗುರು ಫಾ.ಆದರ್ಶ್ ಜೋಸೆಫ್ ಮಾತನಾಡಿ ಎಲ್ಲರಲ್ಲೂ ಭಗವಂತನ ಚೇತನ ಇದೆ. ಒಬ್ಬರೊಬ್ಬರನ್ನು ಅರ್ಥ ಮಾಡಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಾಗ ಸಮಾಜದಲ್ಲಿ ಸಾಮರಸ್ಯ ಇರುತದೆ ಎಂದರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಠಾಣೆಯ ಎ.ಎಸ್.ಐ.ತೋಮಸ್.ಇ.ಜಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಭೆಯಲ್ಲಿ ಕೆ.ಎಸ್.ಎಂ.ಸಿ.ಎ ಗುತಿಗಾರು ಘಟಕದ ಅಧ್ಯಕ್ಷರು ಜೋರ್ಜ್.ಕೆ.ಎಂ ಅಧ್ಯಕ್ಷತೆಯನ್ನು ವಹಿಸಿದರು. ಬಿಟ್ಟಿ ಕೇಂದ್ರ ಕಮ್ಮಿಟ್ಟಿ ಅಧ್ಯಕ್ಷರು ಪ್ರಸ್ತಾವಿಕ ಭಾಷಣ ಮಾಡಿದರು. ಸಿಜೊ ಅಬ್ರಹಾಂ ಸ್ವಾಗತಿಸಿ, ಶೈಜು ವಂದಿಸಿದರು. ಶ್ರೀಮತಿ ಜಿಸ್ಮಿ ಲಿಜೊ ಕಾರ್ಯಕ್ರಮವನ್ನು ನಿರೂಪಿಸಿದರು.