ನೇಸರ .19:ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿ ಕರಯೋಗಂ ವತಿಯಿಂದ ಏರ್ಪಡಿಸಲಾಗಿದ್ದ ಓಣಂ ಆಚರಣೆಯು ದಿನಾಂಕ 18 -09 -2022 ನೇ ಭಾನುವಾರದಂದು ನೆಲ್ಯಾಡಿ ಅಯ್ಯಪ್ಪ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ಪಿ. ಕೆ. ಯಸ್. ಪಿಳ್ಳೈ ಬೆಂಗಳೂರು ಅವರ ನೇತೃತ್ವದಲ್ಲಿ ನಾಯರ್ ಸರ್ವಿಸ್ ಸೊಸೈಟಿಯ ಅಧ್ಯಕ್ಷರು ,ಬೋರ್ಡ್ ಮೆಂಬರ್ಸ್ ,ಸಂಚಾಲಕರು ಹಾಗೂ ಸರ್ವ ಸದಸ್ಯರು ಒಟ್ಟು ಸೇರಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು .
ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಅಧ್ಯಕ್ಷರು ಉನ್ನಿಕೃಷ್ಣನ್ ನಾಯರ್ ,ಉಪಾಧ್ಯಕ್ಷರು ಮಹೇಶ್ ಕುಮಾರ್ , ಶ್ರೀಲತಾ ಮೋಹನ್ ,ಕಾರ್ಯದರ್ಶಿ ವಿನೋದ್ ಕುಮಾರ್ ,ಜೊತೆ ಕಾರ್ಯದರ್ಶಿ ರಾಜೇಶ್ ಕುಮಾರ್ ಬೋರ್ಡ್ ಮೆಂಬರ್ ಗಳಾದ ಶಿವದಾಸನ್ ಪಿಳ್ಳೈ ,ರಘುನಾಥನ್ ನಾಯರ್ , ಚಂದ್ರಶೇಖರನ್ ನಾಯರ್,ಸಂಚಾಲಕರು ,ಮಹಿಳಾ ವಿಭಾಗದ ಅಧ್ಯಕ್ಷೆ ತಂಗಮಣಿ ಅಮ್ಮ,ಕಾರ್ಯದರ್ಶಿ ಶ್ರೀಜಾ ವಿನೋದ್ , ಶಕುಂತಲಾ ವಿನೋದ್ ಹಾಗೂ ನಾಯರ್ ಸರ್ವಿಸ್ ಸೊಸೈಟಿ ಬೆಂಗಳೂರು ,ಮಂಗಳೂರು , ನೆಟ್ಟಣ ,ಉಜಿರೆ ,ಬೆಳ್ತಂಗಡಿ ,ಕೊಕ್ಕಡ ,ಸುಳ್ಯದ ಎಲ್ಲಾ ಸದ್ಯಸರು ಉಪಸ್ಥಿತರಿದ್ದರು .
ಓಣಂ ಪ್ರಯುಕ್ತ ಪೂಕಳಂ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಪ್ರಥಮ ಶ್ರೀಜಾ ಸಂದೀಪ್ ಮತ್ತು ತಂಡ ಉಜಿರೆ ,ದ್ವಿತೀಯ ಪ್ರೀತಾ ಪಿ ಮತ್ತು ತಂಡ ನೆಟ್ಟಣ , ತೃತೀಯ ಬಹುಮಾನವನ್ನು ಶ್ರೀಜಾ ವಿನೋದ್ ಮತ್ತು ತಂಡ ಇಚ್ಲಂಪಾಡಿ ಪಡೆದುಕೊಂಡಿದ್ದಾರೆ.2021 -22 ನೇ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ಹತ್ತನೇ ತರಗತಿಯ ವಿದ್ಯಾರ್ಥಿ ಆದಿತ್ಯ ಇಚ್ಲಂಪಾಡಿ ಹಾಗೂ ದ್ವಿತೀಯ ಪಿ ಯು ಸಿ ಯ ವಿದ್ಯಾರ್ಥಿ ಮಾಯಾ ಉಜಿರೆ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು .