ನೇಸರ ಸೆ.20: ಸುಬ್ರಹ್ಮಣ್ಯ ಭಟ್ “ಜೇಸಿಐ ಶಿಕ್ಷಕ ಸೇವಾ ಪ್ರಶಸ್ತಿ” ತಿಮ್ಮಪ್ಪ ಗೌಡ “ಜೇಸಿಐ ಸಾಮಾಜಿಕ ಸೇವಾ ಪ್ರಶಸ್ತಿ” ಮತ್ತು ಜೇಸಿ.ಡಾ.ಆಶಿತ್ ಎಂ.ವಿ “JCI Outstanding Young Person(OYP) ಪ್ರಶಸ್ತಿ” ಗೌರವ
ಉಪ್ಪಿನಂಗಡಿ 44ನೇ ವರ್ಷದ ಜೇಸಿ ಸಪ್ತಾಹ ಸ್ಪಂದನ 2022 ಮತ್ತು ಜೇಸಿಐ ಭಾರತದ ನಮಸ್ತೆ 2022 ಕಾರ್ಯಕ್ರಮಗಳು “ಮನಸ್ಸುಗಳ ಸ್ಪಂದನೆ – ಸಮಾಜದ ಬಲವರ್ಧನೆ ” ಅನ್ನುವ ಧ್ಯೇಯ ವಾಕ್ಯದಡಿಯಲ್ಲಿ ನಡೆಯಿತು.
ಇದರ ಸಮಾರೋಪ ಸಮಾರಂಭ ರೋಟರಿ ಭವನ ಉಪ್ಪಿನಂಗಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಭಟ್ ಇವರಿಗೆ, “ಜೇಸಿಐ ಶಿಕ್ಷಕ ಸೇವಾ ಪ್ರಶಸ್ತಿ” ಕಾಂಚನ ಹಾಲು ಉತ್ಪಾದಕರ ಸಂಘದ ನಿವೃತ್ತ ನೌಕರ ತಿಮ್ಮಪ್ಪ ಗೌಡ ಇವರಿಗೆ “ಜೇಸಿಐ ಸಾಮಾಜಿಕ ಸೇವಾ ಪ್ರಶಸ್ತಿ” ಮತ್ತು ಉಪ್ಪಿನಂಗಡಿ ಅದ್ವಿಕ್ ದಂತ ಕ್ಲಿನಿಕ್ ದಂತ ತಜ್ಞರ ಡಾ. ಆಶಿತ್ ಎಂ.ವಿ.ಇವರಿಗೆ “JCI Outstanding Young Person” (OYP) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಚಂದ್ರ ಮುಳಿಯ, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯ ಮುಕುಂದ ಬಜತ್ತೂರು, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ನಾಯಕ್
ವಲಯ 15 ಪೂರ್ವಾ ವಲಯಾಧ್ಯಕ್ಷ ಜೇಸಿ ಅಶೋಕ್ ಚೂಂತಾರು, ಪೂರ್ವಾ ವಲಯ ಉಪಾಧ್ಯಕ್ಷ ಜೇಸಿ ಪ್ರದೀಪ್ ಬಾಕಿಲ, ಘಟಕದ ಪೂರ್ವಾಧ್ಯಕ್ಷಗಳಾದ ಜೇಸಿ ಡಾ.ರಾಜರಾಮ್,ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ ಭಾಗವಹಿಸಿದ್ದರು. ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ್ ಕಲ್ಲಳಿಕೆ, ರವೀಂದ್ರ ದರ್ಬೆ, ಹರೀಶ್ ನಟ್ಟಿಬೈಲು, ಆನಂದ ರಾಮಕುಂಜ, ಕೇಶವ ರಂಗಾಜೆ, ಉಮೇಶ ಆಚಾರ್ಯ , ಮೋನಪ್ಪ ಪಮ್ಮನ ಮಜಲು, ಶಶಿಧರ್ ನೆಕ್ಕಿಲಾಡಿ, ಜೇಸಿರೇಟ್ ಪೂರ್ವಾಧ್ಯಕ್ಷರಗಳಾದ ಶ್ರೀಮತಿ ರಮ್ಯಾ ರಾಜಾರಾಂ, ಶ್ರೀಮತಿ ಪ್ರೇಮಾ ಆನಂದ ರಾಮಕುಂಜ, ರಾಜಗೋಪಾಲ್ ಕೈಲಾರ್, ರಾಘವೇಂದ್ರ ನಟ್ಟಿಬೈಲು, ಉಪನ್ಯಾಸಕ ತಿಲಕ್,ಶಿ ಕ್ಷಕಿ ಪುಷ್ಪಾ ತಿಲಕ್, ಕುಶಾಲಪ್ಪ, ಸುರೇಶ್, ಗುಣಾಕರ್, ಚಂದ್ರಶೇಖರ್ ಶೆಟ್ಟಿ, ವಿಕ್ರಂ ಯುವಕ ಮಂಡಲ ಕಾಂಚನ ಅಧ್ಯಕ್ಷರಾದ ಅನಿಲ್ ಪಿಂಟೊ, ಉಪಾಧ್ಯಕ್ಷರಾದ ಸಚಿನ್ ಮುದ್ಯ, ಧನಂಜಯ ಪುಯಿಲ, ತ್ಯಾಗರಾಜ, ಪುರಂದರ, ವಿಶ್ವನಾಥ್ ಕುಲಾಲ್ ಕರಾಯ, ಪ್ರದೀಪ್ ಆರ್ಚಾಯ,ಪ್ರವೀಳಾ, ಮಹೇಶ್, ಪುರುಷೋತ್ತಮ, ಪುನೀತ್ ಮಂಜಿಪಲ್ಲ, ಮಾಸ್ಟರ್ ದಿಶಾಂತ್, ಪ್ರಶಸ್ತಿ ಪುರಸ್ಕೃತ ಕುಟುಂಬಸ್ಥರು, ಬಂಧು ಬಳಗದವರು ಉಪಸ್ಥಿತರಿದ್ದರು. ದಿವಾಕರ ಶಾಂತಿನಗರ ಜೇಸಿವಾಣಿ ಉದ್ಘೋಷಿಸಿದರು. ಸಪ್ತಾಹದ ನಿರ್ದೇಶಕರಾದ ಜೇಸಿ ಅವನೀಶ್ ಸಪ್ತಾಹದ ವರದಿ ವಾಚಿಸಿದರು. ಕಾರ್ಯದರ್ಶಿ ಜೇಸಿ ಲವೀನಾ ಪಿಂಟೊ ವಂದಿಸಿದರು. ಘಟಕದ ಪೂರ್ವಾಧ್ಯಕ್ಷರು, ಹಿರಿಯ ಮತ್ತು ಯುವ ಜೇಸಿ ಸದಸ್ಯರ, ಜೇಸಿ ಬಂಧುಗಳ ಸಮಾಗಮ “ಕುಟುಂಬ ಸಮ್ಮಿಲನ”ಕಾರ್ಯಕ್ರಮ ನಡೆಯಿತು. ಭೋಜನದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.