ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಹಿಂದಿ ದಿವಸದ ಸಂಭ್ರಮಾಚರಣೆ

ಶೇರ್ ಮಾಡಿ

ನೇಸರ ಸೆ.19: ಬಜತ್ತೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಕ್ಕೊಳಪಟ್ಟ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಸಾಹಿತ್ಯ ಸಂಘದ ವತಿಯಿಂದ ಹಿಂದಿ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಹಿಂದಿ ಭಾಷೆ ಒಂದು ಗೊತ್ತಿದ್ದರೆ ಇಂದು ದೇಶದ ಯಾವುದೇ ಮೂಲೆಗೂ ಹೋಗಿ ಸಂಭಾಷಣೆ ಯನ್ನು ನಡೆಸಿಕೊಂಡು ನೆಮ್ಮದಿಯಿಂದ ಬರಬಹುದು ಅದು ನಮ್ಮ ರಾಷ್ಟ್ರ ಭಾಷೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ ಉಡುಪ ಇವರು ಹೇಳಿದರು.

ಶಾಲೆಯಲ್ಲಿ ನಡೆಸಿದ ಹಿಂದಿ ದಿವಸದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷ ಸ್ಥಾನ ದಿಂದ ಇವರು ಮಾತನಾಡುತ್ತಾ ಹಿಂದಿ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುತ್ತಾ ತನ್ನ ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಗೀತ ಶಿಕ್ಷಕಿಯಾದ ಶ್ರೀಮತಿ ಪ್ರತಿಭಾ.ಎ ರವರು ಹಿಂದಿ ದಿವಸದ ಆಚರಣೆಯ ಹಿನ್ನೆಲೆ ಮಹತ್ವದ ಕುರಿತು ತಿಳಿಸಿದರು ಹಾಗೂ ಹಿಂದಿ ದಿವಸದ ಆಚರಣೆಯ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಹಿಂದಿ ಭಾಷಾ ಶಿಕ್ಷ ಕಿಯಾಗಿರುವ ಶ್ರೀಮತಿ ವಿಜಯಲಕ್ಷ್ಮೀ ಅವರು ಹಿಂದಿ ಭಾಷೆಯ ಮಹತ್ವದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ದೇಶವಿದೇಶಗಳಲ್ಲಿ ವ್ಯವಹಾರಿಕವಾಗಿ ಹಿಂದಿ ಭಾಷೆಯನ್ನು ಬಳಸುತ್ತಿದ್ದಾರೆ ಎಂಬುದಾಗಿ ತಿಳಿಸಿದರು. ನಂತರ ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಸುಜಾತ ರವರು ಮಕ್ಕಳನ್ನುದ್ದೇಶಿಸಿ ಹಿಂದಿ ಭಾಷೆ ಅತ್ಯಂತ ಸುಲಭ ಭಾಷೆಯಾಗಿದ್ದು ನಾವೆಲ್ಲರೂ ಅದನ್ನು ಕಲಿಯಬೇಕು ಎಂಬುದಾಗಿ ಮಕ್ಕಳಿಗೆ ತಾವು ಹಿಂದಿಯಲ್ಲಿ ಮಾತನಾಡುತ್ತಲೇ ಉತ್ತೇಜಿಸಿದರು. ನಂತರ ಮುಖ್ಯೋಪಾಧ್ಯಾಯರು ಮುಖ್ಯ ಅತಿಥಿಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಮಕ್ಕಳಿಗೆ ಹಿಂದಿ ದಿನಾಚರಣೆಯ ಪ್ರಯುಕ್ತ ಪ್ರಬಂಧ ಹಾಗೂ ಅಂದವಾದ ಬರಹ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನೇಹಾ, ನಿಕ್ಷಿತ, ಲೀಕ್ಷಿತಾ, ಶ್ರವಣ್ ಮೇರಾ ಪಾಠಶಾಲಾ ಮೇರಾ ದೇಶ್ ಮೇರಾ ರಾಜ್ಯ ವಿಷಯದ ಕುರಿತು ಭಾಷಣ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳು ನೃತ್ಯ ಹಾಡು ಹಾಗೂ ಕಥೆಗಳನ್ನು ಹೇಳಿದರು. ಪೂರ್ವಿಕಾ ಬಳಗದವರು ಪ್ರಾರ್ಥಿಸಿ ರಕ್ಷಿತಾ ಸ್ವಾಗತಿಸಿ ಹಿತೇಶ್ ವಂದಿಸಿ ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹಿಂದಿ ಭಾಷಾ ಶಿಕ್ಷಕಿಯಾಗಿರುವ ಶ್ರೀಮತಿ ವಿಜಯಲಕ್ಷ್ಮಿ ಅವರು ಹಿಂದಿಯಲ್ಲೇ ನಿರ್ವಹಿಸಿದರು. ಸಭೆಯಲ್ಲಿ ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಮಂಜುಳಾ ಅಧ್ಯಕ್ಷರಾದ ಪವನ್ ಮತ್ತು ಕಾರ್ಯದರ್ಶಿಯಾಗಿರುವ ಸ್ವಾತಿ ಉಪಸ್ಥಿತರಿದ್ದರು.

See also  ಪುತ್ತೂರು ಬ್ಯಾನರ್ ಪ್ರಕರಣ: ‘ಒಳಗಿನ ಸತ್ಯ ನಮಗೆ ಗೊತ್ತಿದೆ’ ಎಂದ ಶಾಸಕ ಯತ್ನಾಳ್ ಹೇಳಲು ಕಾರಣವೇನು?

Leave a Reply

Your email address will not be published. Required fields are marked *

error: Content is protected !!