ಬಿಜೆಪಿಯ ಭೀಷ್ಮ-ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್ ವಿಧಿವಶ

ಶೇರ್ ಮಾಡಿ

ನೇಸರ ಡಿ06: “ಬಿಜೆಪಿಯ ಭೀಷ್ಮ” ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್‌ರವರು ಸ್ವಗೃಹದಲ್ಲಿ ಡಿ 6ರಂದು ನಿಧನರಾಗಿದ್ದಾರೆ.ಉರಿಮಜಲು ರಾಮ ಭಟ್ಟರವರು 92ರ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಉರಿಮಜಲುನ ಅವಿಭಕ್ತ ಹವ್ಯಕ ಕುಟುಂಬದ ಕೆ.ರಾಮ ಭಟ್ಟರವರು ತನ್ನ ಶಿಕ್ಷಣದ ವೇಳೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದವರು. ಆರ್.ಎಸ್.ಎಸ್. ಮೂಲಕ ಪುತ್ತೂರನ್ನು ಹಿಂದುತ್ವದ ಭದ್ರಕೋಟೆ ಮಾಡಲು ಅಡಿಪಾಯ ಹಾಕಿದ್ದವರು. ಜನಸಂಘ, ಬಿಜೆಪಿ ಮೂಲಕ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯಂತಹ ರಾಷ್ಟ್ರ ಮಟ್ಟದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ವಕೀಲರಾಗಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿ, ಪುರಸಭೆಯ ಅಧ್ಯಕ್ಷರಾಗಿ, ಕ್ಯಾಂಪ್ಕೋದ ಅಧ್ಯಕ್ಷರಾಗಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ, ವಿದ್ಯಾಸಂಸ್ಥೆಗಳ ನಿರ್ಮಾತೃವಾಗಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದ ರಾಮ ಭಟ್‌ರವರು “ಬಿಜೆಪಿಯ ಭೀಷ್ಮ” ಎಂದೇ ಜನ ಜನಿತವಾಗಿದ್ದವರು. ಜನಸಂಘ ಮತ್ತು ಬಳಿಕ ಬಿಜೆಪಿಯ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ರಾಮ ಭಟ್ಟರವರು ಹಲವು ನಾಯಕರನ್ನು ಬೆಳೆಸಿದವರು. ರಾಜ್ಯದ ಬಿಜೆಪಿ ಶಾಸಕರಲ್ಲಿ ರಾಮ ಭಟ್ ಒಬ್ಬರಾಗಿದ್ದವರು. ಇಂದಿರಾಗಾಂಧಿಯವರು ದೇಶಾದ್ಯಂತ ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗ ಅದರ ವಿರುದ್ಧ ಹೋರಾಟ ರೂಪಿಸಿ ಜೈಲು ಸೇರಿದ್ದವರು. ಹಾಗೂ ರಾಷ್ಟ್ರ ರಾಜಕಾರಣದ ಭೀಷ್ಮ ಎಂದೇ ಜನಾನುರಾಗಿ. 1985ರ ಬಳಿಕ ಸಕ್ರಿಯ ರಾಜಕೀಯದಿಂದ ದೂರವಾದರೂ.ಪಕ್ಷದ ಆಗು ಹೋಗುಗಳಲ್ಲಿ ರಾಮ್ ಭಟ್ಟರ ಅಭಿಪ್ರಾಯಗಳೇ ಮುಖ್ಯ ಪಾತ್ರ ವಹಿಸುತ್ತಿದ್ದವು

Leave a Reply

error: Content is protected !!