ನೇಸರ ಡಿ06: ಗ್ರಾಮೀಣ ಬದುಕಿನಿಂದ ಯುವಜನತೆ ದೂರ ಸರಿಯುತ್ತಿರುವ ದಿನಗಳಲ್ಲಿ ಶಾಸ್ತಾರ ಫ್ರೆಂಡ್ಸ್ ಹಾರ್ಪಳ-ನೆಲ್ಯಾಡಿ ಇವರ ಮೊದಲ ಪ್ರಯತ್ನವಾಗಿ ತುಳುನಾಡಿನ ಕ್ರೀಡೆಗಳನ್ನು ಪರಿಚಯಿಸುವ ಕ್ರೀಡಾಕೂಟ “ಕೆಸರ್ ಡೊಂಜಿ ಗೌಜಿ” ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಮತ್ತು ಮನೋರಂಜನಾ ಕ್ರೀಡೆಗಳು ಮತ್ತು ಹಗ್ಗಜಗ್ಗಾಟ ಪಂದ್ಯಗಳು
ದಿನಾಂಕ 5-12-2021 ನೇ ಆದಿತ್ಯವಾರ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಕುತ್ರಾಡಿ ಹಾರ್ಪಳ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಿತು. ಉದ್ಯಮಿ ಕುಶಾಲಪ್ಪಗೌಡ ಪೂವಾಜೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಶಾಸ್ತಾರ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ಅಧ್ಯಕ್ಷತೆ ವಹಿಸಿದ್ದರು.ದೈಹಿಕ ಶಿಕ್ಷಕ ಕುಶಾಲಪ್ಪ ಮುಖ್ಯ ಅತಿಥಿಗಳಾಗಿ ಕ್ರೀಡೆಗಳು ಮನಸ್ಸಿಗೆ ಮುದನೀಡುವಂತದ್ದು, ಅದರಲ್ಲೂ ಕೃಷಿಕರ ಬದುಕಿನ ಭಾಗವಾದ ಕೆಸರು ಗದ್ದೆಯಲ್ಲಿ ನಡೆಯುವ ಕ್ರೀಡಾಕೂಟಗಳು ಆರೋಗ್ಯದಾಯಕ ಎಂದರು. ವೇದಿಕೆಯಲ್ಲಿ ಸುಂದರ ಗೌಡ ಅತ್ರಿಜಾಲು, ಶಿವರಾಮಗೌಡ ಮಕ್ಕಿಗದ್ದೆ, ರವಿಚಂದ್ರ ಗೌಡ ಅತ್ರಿಜಾಲು,ರಘುನಾಥ ರೈ ಹಾರ್ಪಳ, ನವೀನ್ ಕೊಪ್ಪ, ಕುಶಾಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.ನಿವೃತ್ತ ಸೇನಾನಿ ಪ್ರವೀಣ್ ಕುಮಾರ್ ರವರು ಕ್ರೀಡಾಕೂಟದ ಅಂಕಣ ಉದ್ಘಾಟಿಸಿ ಕ್ರೀಡಾಳುಗಳಿಗೆ ಶುಭಹಾರೈಸಿದರು,
ಶೀನಪ್ಪ ಗೌಡ ನಿರೂಪಿಸಿ, ಪ್ರಕಾಶ್ ರಾಮನಗರ ಧನ್ಯವಾದ ಸಮರ್ಪಿಸಿದರು, ಖ್ಯಾತ ನಿರೂಪಕ ಹಗ್ಗಜಗ್ಗಾಟ ಪಂದ್ಯಗಳ ಅನುಭವಿ ವಿಕ್ಷಕವಿವರಣೆಗಾರ ಸುರೇಶ್ ಪಡಿಪಂಡ ನೇತೃತ್ವದಲ್ಲಿ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳು ನಡೆದು ನೂರಾರು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತಿಮ್ಮಪ್ಪಗೌಡ ಅಧ್ಯಕ್ಷತೆಯಲ್ಲಿ ಸೂರ್ಯನಾರಾಯಣ ಜೋಗಿತ್ತಾಯ, ಸತೀಶ್ ಕೆ.ಯಸ್,ಪುರಂದರ ಗೌಡ ಡೆಂಜ, ಸೀತಾರಾಮ ಗೌಡ ಕಾನಮನೆ,ಬಾಲಕೃಷ್ಣ ಗೌಡ ಹಾರ್ಪಳ, ರವಿಚಂದ್ರ ಹೊಸವಕ್ಲು ಮೊದಲಾದವರು ಪಾಲ್ಗೊಂಡಿದ್ದರು.
ಹಗ್ಗಜಗ್ಗಾಟದ ಪ್ರಥಮ ಶಾಸ್ತಾರ ಫ್ರೆಂಡ್ಸ್ ಹಾರ್ಪಳ, ದ್ವಿತೀಯ ವಿನಾಯಕ ಫ್ರೆಂಡ್ಸ್ ಕುಂಬ್ರ,ತೃತೀಯ ಸಾಯಿ ಫ್ರೆಂಡ್ಸ್ ಮೊಗ್ರು-ಬಂದಾರು, ಚತುರ್ಥಿ ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ ಇವರು ಪಡೆದರು.