ಜೇಸಿ ಸೆನೆಟರ್ ರೋಯನ್ ಉದಯ್ ಕ್ರಾಸ್ತಾ: ಜೇಸಿಐ ಭಾರತ ವಲಯ 15 ವಲಯಾಧ್ಯಕ್ಷರಾಗಿ ಆಯ್ಕೆ

ಶೇರ್ ಮಾಡಿ

ನೇಸರ ಡಿ06: ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಅದ್ದೂರಿ ವಲಯ ಸಮ್ಮೇಳನದಲ್ಲಿ ಜೇಸಿಐ ಭಾರತ ವಲಯ 15 ವಲಯಾಧ್ಯಕ್ಷ ಸ್ಥಾನಕ್ಕೆ ಡಿ05 ರಂದು ನಡೆದ ಚುನಾವಣೆಯಲ್ಲಿ. 2013ರಲ್ಲಿ ಜೇಸೀಐ ಸುಳ್ಯ ಪಯಸ್ವಿನಿಗೆ ಪಾದಾರ್ಪಣೆ ಮಾಡಿ ಘಟಕ ಹಾಗೂ ವಲಯದಲ್ಲಿ 2021ರ ವರೆಗೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ, ಜೇಸಿ ಸೆನೆಟರ್ ರೋಯನ್ ಉದಯ್ ಕ್ರಾಸ್ತಾ ರವರು ಪ್ರತಿಸ್ಪರ್ಧಿ ರವರಿಂದ 120 ಮತಗಳ ಅಂತರದಲ್ಲಿ ವಿಜಯಶಾಲಿಯಾಗಿ 2022 ನೇ ವರ್ಷದ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷರುಗಳ ಚುನಾವಣೆಯಲ್ಲಿ ವಲಯ ಉಪಾಧ್ಯಕ್ಷರುಗಳಾಗಿ ಜೇಸಿ ದೀಪಕ್ ಗಂಗೂಲಿ, ಜೇಸಿ ದಿನೇಶ್ ಕೆ. ಶೆಟ್ಟಿ, ಜೇಸಿ ಹರೀಶ್ ಶೇಟ್, ಜೇಸಿ ಪ್ರಶಾಂತ್, ಜೇಸಿ ರವಿಚಂದ್ರ ಪಾಟಾಳಿ, ಜೇಸಿ ಸ್ವಾತಿ ಜಗನ್ನಾಥ್ ರೈ, ಜೇಸಿ ವಿಜಯ ನರಸಿಂಹ ಐತಾಳ್ ವಿಜಯಗೊಂಡರು. ಚುನಾವಣಾ ಅಧಿಕಾರಿಯಾಗಿ ಜೇಸೀ ರಿಕೇಶ್ ಶರ್ಮ ಕಾರ್ಯ ನಿರ್ವಹಿಸಿದರು.

Leave a Reply

error: Content is protected !!