ನೇಸರ ಡಿ08: ನೂತನವಾಗಿ ನಿರ್ಮಿಸಿದ ವಿದ್ಯಾಮಂದಿರ ದಾಶರಥಿಯ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 8-12-2021 ನೇ ಬುಧವಾರದಂದು ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ, ದಶಮಾನೋತ್ಸವದ ನಿಮಿತ್ತ ನಡೆಯಲಿದೆ ಬೆಳಿಗ್ಗೆ 7.00 ಗಂಟೆಗೆ ಗಣಪತಿ ಹವನ, ಸರಸ್ವತಿ ಹವನ 10.20ಕ್ಕೆ ಲೋಕಾರ್ಪಣಾ ಕಾರ್ಯಕ್ರಮ ಶ್ರೀರಾಮ ಕ್ರೀಡಾಂಗಣದ ಉದ್ಘಾಟನೆ, ಶೌಚಾಲಯ ಸಂಕೀರ್ಣಕ್ಕೆ ಭೂಮಿಪೂಜೆ,11.00 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಉದ್ಘಾಟನೆ ಅಂಗಾರ ಮಾನ್ಯ ಉಸ್ತುವಾರಿ ಸಚಿವರು ದಕ್ಷಿಣಕನ್ನಡ, ಅತಿಥಿಗಳಾಗಿ ಸುನಿಲ್ ಕುಮಾರ್ ಮಾನ್ಯ ಸಚಿವರು ಇಂಧನ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ,ನಳಿನ್ ಕುಮಾರ್ ಕಟೀಲು ಸಂಸದರು ಮಂಗಳೂರು,ಸಂಜೀವ ಮಠಂದೂರು ಶಾಸಕರು ಪುತ್ತೂರು,ಶ್ರೀಮತಿ ಚೇತನಾ ಅಧ್ಯಕ್ಷರು ಗ್ರಾಮ ಪಂಚಾಯಿತಿ ನೆಲ್ಯಾಡಿ,ಸತ್ಯಶಂಕರ.ಕೆ ಎಂ.ಪಿ ಶಂಕರ್ ಸಮೂಹ ಸಂಸ್ಥೆಗಳು ನರಿಮೊಗರು ಪುತ್ತೂರು, ಮೋಹನ್ ಸುಳ್ಳಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಡಾ.ಎಂ.ನಾರಾಯಣ ಭಟ್ಟ ವಿಶ್ರಾಂತ ಡೀನ್ ಪಶುವೈದ್ಯಕೀಯ ಕಾಲೇಜ್ ಹೆಬ್ಬಾಳ ಬೆಂಗಳೂರು, ಡಾ.ಮುರಳೀಧರ ಅಶ್ವಿನಿ ಆಸ್ಪತ್ರೆ ನೆಲ್ಯಾಡಿ, ರಾಜಾರಾಮ ಜನರಲ್ ಮ್ಯಾನೇಜರ್ ಭಾರತೀಯ ರಿಸರ್ವ್ ಬ್ಯಾಂಕ್ ಮೈಸೂರು, ನಟ್ಟಿ ಈಶ್ವರ ನಾಯಕ್ ಕುಳ್ಳಾಜೆ ಹಿರಿಯ ಕೃಷಿಕರು ಬಜತ್ತೂರು, ಲೋಕೇಶ್ ಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕೆ.ಎಂ ಕೃಷ್ಣಭಟ್ ಕಾರ್ಯದರ್ಶಿಗಳು, ಶ್ರೀಧರ ಗೋರೆ ಅಧ್ಯಕ್ಷರು ದಶಮಾನೋತ್ಸವ ಸಮಿತಿ, ಜಯಪ್ರಕಾಶ್ ನೆಕ್ರಾಜೆ ಗೌರವ ಅಧ್ಯಕ್ಷರು,ರವಿಚಂದ್ರ ಅಧ್ಯಕ್ಷರು,ಬಾಲಕೃಷ್ಣ ಬಾಣಜಾಲು,ಗಣೇಶ್ ವಾಗ್ಲೆ ಮುಖ್ಯಗುರುಗಳು ಮಾಹಿತಿಯನ್ನು ನೀಡಿದರು.