ಐತ್ತೂರು ಗ್ರಾ.ಪಂ ಸದಸ್ಯ ಮನಮೋಹನ್ ಗೋಳ್ಯಾಡಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ

ಶೇರ್ ಮಾಡಿ

ನೇಸರ ಸೆ.23: ಕಡಬ ಐತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಮನಮೋಹನ್ ಗೋಳ್ಯಾಡಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಟಿಸಲಾಗಿದೆ ಎಂದು ಕಾಂಗ್ರೆಸ್ ಕಡಬ ಬ್ಲಾಕ್ ಅಧ್ಯಕ್ಷ ಸುದೀರ್ ಕುಮಾರ್ ಹೇಳಿದರು.
ಕಡಬದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲಿತ ಐತ್ತೂರು ಗ್ರಾಮ ಪಂಚಾಯಿತಿ ಸದಸ್ಯೆ ಶ್ಯಾಮಲ ಅವರು ಮೀಸಲಾತಿ ಪ್ರಕಾರ ಗ್ರಾ.ಪಂ ಅಧ್ಯಕ್ಷರಾಗಿ ಚುನಾಯಿತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಮದ್ಯೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಬಿಜೆಪಿ ಬೆಂಬಲಿತ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮನಮೋಹನ್ ಗೋಳ್ಯಾಡಿ ಅವರಿಗೆ ತಿಳುವಳಿಕೆ ಪತ್ರ ನೀಡಿ ಪಕ್ಷದ ಬದ್ದತೆಯನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಆದಾಗ್ಯೂ ಅವರು ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ಸೇರಿಕೊಂಡು ಅವಿಶ್ವಾಸ ಗೊತ್ತುವಳಿ ಆಗ್ರಹಕ್ಕೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ಐತ್ತೂರು ಗ್ರಾಮ ಕಾಂಗ್ರೆಸ್ ಸಮಿತಿಯ ಶಿಪಾರಿಸ್ಸಿನಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಜಿಲ್ಲಾ ಕಾಂಗ್ರೆಸ್ಸಿನ ಸೂಚನೆಯಂತೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಎಂದರು.

ಅವಿಶ್ವಾಸ ಮಂಡನೆಗೆ ಆಗ್ರಹಿಸಿದ ಬಿಜೆಪಿ ಬೆಂಬಲಿತರೊಂದಿಗೆ ಶಾಮಿಲಾದ ಮನಮೋಹನ್ ಗೋಳ್ಯಾಡಿ ಅವರೊಂದಿಗೆ ಇನ್ನಿಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರು ಸೇರಿಕೊಂಡಿದ್ದರು. ಇವರಿಬ್ಬರು ಗೋಳ್ಯಾಡಿ ಅವರ ಅಮೀಷಕ್ಕೆ ಬಲಿಯಾಗಿ ಬೆಂಬಲ ಸೂಚಿಸಿದ್ದರು. ಆ ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಲ್ಲಿ ಕ್ಷಮಾಪಣೆ ಕೋರಿ ಇನ್ನು ಮುಂದಕ್ಕೆ ಕಾಂಗ್ರೆಸ್ ಪಕ್ಷದ ಶಿಸ್ತುಗೆ ಬದ್ದನಾಗಿರುತ್ತೆವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಇವರ ಮೇಲೆ ಯಾವೂದೆ ಕ್ರಮಕೈಗೊಳ್ಳಲಿಲ್ಲ ಎಂದರು. ಪಕ್ಷದಲ್ಲಿ ಆಶಿಸ್ತು ತೋರಿಸಿದ ಮನಮೋಹನ್ ಗೋಳ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆ ಎದುರಿಸಿ ಗೆದ್ದು ತೋರಿಸಲಿ ಎಂದು ಸುದೀರ್ ಕುಮಾರ್ ಇದೇ ವೇಳೆ ಸವಾಲು ಹಾಕಿದರು.
ಪತ್ರೀಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಜಯ ಕುಮಾರ್ ರೈ, ಬಾಲಕೃಷ್ಣ ಬಳ್ಳೇರಿ, ಸೈಮನ್ ಸಿ ಜೆ, ಸತೀಶ್ ನಾೈಕ್, ಶರೀಫ್ ಎ ಎಸ್, ಸತೀಶ್ ಮೀನಾಡಿ ಇದ್ದರು.

Leave a Reply

error: Content is protected !!