ಗೆಲುವೊಂದೇ ವಿದ್ಯಾರ್ಥಿಗಳ ಮೂಲಮಂತ್ರವಾಗ ಬೇಕು- ಇ.ಸಿ.ಒ ಹರಿಪ್ರಸಾದ್

ಶೇರ್ ಮಾಡಿ

ನೇಸರ ಸೆ.23: ಉದನೆ ಪ್ರತಿಯೊಬ್ಬ ವಿದ್ಯಾರ್ಥಿಯ ಚಿತ್ತ ಗೆಲುವಿನತ್ತ ಇರಬೇಕು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಇ.ಸಿ.ಒ ಹರಿಪ್ರಸಾದ್ ಅಭಿಪ್ರಾಯ ಪಟ್ಟರು. ಅವರು ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆ ಉದನೆ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶಿರಾಡಿ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿನುತ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಜವಾದ ವೇದಿಕೆ ಪ್ರತಿಭಾ ಕಾರಂಜಿ ಎಂದು ಹೇಳಿ ಎಲ್ಲಾ ಸ್ಪರ್ಧಿಗಳಿಗೆ ಶುಭವನ್ನು ಹಾರೈಸಿದರು.
ಸಂಸ್ಥೆಯ ಸಂಚಾಲಕರಾದ ರೆ.ಫಾ .ಹನಿ ಜೇಕಬ್ ಮಾತನಾಡುತ್ತಾ, ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ. ವಿದ್ಯಾರ್ಥಿಗಳು ತಾವು ಬೆಳಗಿ ಇತರರ ಜೀವನದ ದಾರಿ ದೀಪವಾಗ ಬೇಕು. ಆಗ ಮಾತ್ರ ಸಮಾಜದ ಒಂದು ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಎಂದು ಹೇಳಿ ಎಲ್ಲರಿಗೂ ಶುಭವನ್ನು ಹಾರೈಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ, ಕಡಬ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಾಂತಾರಾಮ ಓಡ್ಲ, ಕಡಬ ಸಹಶಿಕ್ಷಕರ ಸಂಘದ ರಾಜ್ಯಪರಿಷತ್ ಸದಸ್ಯ ಸತ್ಯನಾರಾಯಣ.ಎಚ್, ಕಡಬ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ರಾಜೇಶ್ ರೈ .ಎಸ್ ಇವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ಹಾಗೂ ಅಶ್ರಫ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಿಮ್ಸನ್ ಕೆ.ಜೆ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸುಂದರ ಗೌಡ ಬಳಕ್ಕಳ, ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ, ಉಪ್ಪಿನಂಗಡಿ ಪ್ರತಿಭಾ ಕಾರಂಜಿ‌‌ ನೋಡಲ್ ಅಧಿಕಾರಿಯವರಾದ ಶ್ರೀಧರ ಗೌಡ ಬಿ, ಬಿಷಪ್ ಪೋಲಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಉದನೆ ಇಲ್ಲಿನ ಮುಖ್ಯಗುರುಗಳಾದ ಸಿಬಿಚ್ಚನ್ ಟಿ.ಸಿ, ಉಪಸ್ಥಿತರಿದ್ದರು.
ಸ್ಪರ್ಧಾಳು, ವಿದ್ಯಾರ್ಥಿಗಳು, ಪಾಲಕರು, ಊರಿನ ವಿದ್ಯಾಭಿಮಾನಿಗಳು, ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ಶಿಕ್ಷಕರು, ಬಿಷಪ್ ಪೋಳಿಕಾರ್ಪೊಸ್ ಪಬ್ಲಿಕ್ ಸ್ಕೂಲ್ ನ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಚಾಲಕರು, ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸೈಂಟ್ ಆಂಟನೀಸ್ ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ಮುಖ್ಯಗುರುಗಳು ಹಾಗೂ ಪ್ರತಿಭಾ ಕಾರಂಜಿ ಉಪ್ಪಿನಂಗಡಿ ವಲಯ ನೋಡಲ್ ಅಧಿಕಾರಿ ಶ್ರೀಧರ ಗೌಡ ಎಲ್ಲರನ್ನೂ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಬಾಲಕೃಷ್ಣ ಗೌಡ ವಂದಿಸಿದರು. ಸಹಶಿಕ್ಷಕ ಯಶೋಧರ ನಿರೂಪಿಸಿದರು.

Leave a Reply

error: Content is protected !!