ಕೊಕ್ಕಡ: ಚಿಕ್ಕಮಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಹತ್ಯಡ್ಕ ನಿವಾಸಿ ನಿಧನ

ಶೇರ್ ಮಾಡಿ

ನೇಸರ ಸೆ.23: ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ತುಂಬೆತ್ತಡ್ಕದ ನಿವಾಸಿ ಸಂಜೀವರವರ ಪುತ್ರ ಚನ್ನಕೇಶವ (26.ವ) ಅವರು ಸೆ.22 ರಂದು ರಸ್ತೆ ಅಪಘಾತದಲ್ಲಿ ನಿಧನರಾದರು.

ಚಿಕ್ಕಮಗಳೂರಿನಲ್ಲಿ ಲ್ಯಾಬ್ ಟೆಕ್ನೀಶಿಯಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಗಣೇಶ ವಿಸರ್ಜನೆ ಕಾರ್ಯಕ್ರಮವನ್ನು ವೀಕ್ಷಿಸಿ ಮನೆಗೆ ತೆರಳುತ್ತಿರುವ ವೇಳೆ ಚಿಕ್ಕಮಗಳೂರಿನ ಕೆಎಸ್ಆರ್‌ಟಿಸಿ ಬಸ್ ಡಿಪೋದ ಬಳಿ ಬೈಕ್ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ. ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಇಂದು ಸ್ವ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಚಿಕ್ಕಮಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮೃತರು ತಂದೆ ಸಂಜೀವ, ತಾಯಿ ಶೋಭಾ, ತಂಗಿ ಪುಷ್ಪಲತಾ ರನ್ನು ಅಗಲಿದ್ದಾರೆ.

See also  ಲಾವತ್ತಡ್ಕ: ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಕಾರಿನ ಮಧ್ಯೆ ಅಪಘಾತ

Leave a Reply

Your email address will not be published. Required fields are marked *

error: Content is protected !!