ಕೊಕ್ಕಡ: ಪವರ್‌ಮ್ಯಾನ್‌ಳಿಗೆ ಹಲ್ಲೆ ಪ್ರಕರಣದ ಆರೋಪಿ ರಿಜೀಶ್ ಗೆ ನ್ಯಾಯಾಂಗ ಬಂಧನ

ಶೇರ್ ಮಾಡಿ

ನೇಸರ ಸೆ.23: ವಿದ್ಯುತ್ ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಳಿಸಿದ ಹಿನ್ನೆಲೆ ಪವರ್‌ಮ್ಯಾನ್‌ಳಿಗೆ ಹಲ್ಲೆ ನಡೆಸಿದ ಘಟನೆ ಕೊಕ್ಕಡ ಜಂಕ್ಷನ್‌ನಲ್ಲಿ(ಸೆ22) ಗುರುವಾರ ರಾತ್ರಿ ಸಂಭವಿಸಿದೆ.
ಹಲ್ಲೆ ನಡೆಸಿದಾತನನ್ನು ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ದಿ.ಕಾಂತು ಪೂಜಾರಿಯವರ ಅಳಿಯ ರಿಜೀಶ್(38) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಮೆಸ್ಕಾಂ ಪವರ್ ಮ್ಯಾನ್ ದುಂಡಪ್ಪ ರವರ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೋರ್ವ ಪವರ್ ಮ್ಯಾನ್ ಉಮೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಬರಬಾರದು ಎನ್ನುವ ನಿಟ್ಟಿನಲ್ಲಿ ಮೆಸ್ಕಾಂ ಪವರ್‌ಮ್ಯಾನ್‌ಗಳು ಅನಿರ್ಧಿಷ್ಟಾವಧಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಈ ರೀತಿ ಗ್ರಾಹಕರು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಮುಂದೆ ಈ ರೀತಿಯ ಪ್ರಕರಣ ಮರುಕಳಿಸಬಾರದು ಎನ್ನುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ದ ಕಾನೂನಿನ ಅಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ.
ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್, ಎಇಇ, ಉಜಿರೆ ಮೆಸ್ಕಾಂ

See also  ಅನುಮಾನಾಸ್ಪದ ರೀತಿಯಲ್ಲಿ ದಿಲೀಪ ಮೃತಪಟ್ಟಿದ್ದನ್ನು ಭೇದಿಸಿದ ಪೊಲೀಸರು

Leave a Reply

Your email address will not be published. Required fields are marked *

error: Content is protected !!