ನೆಲ್ಯಾಡಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ; ಉದನೆಯ ಬಿಷಪ್ ಪಬ್ಲಿಕ್ ಸ್ಕೂಲ್ ಗೆ ಪ್ರಥಮ ಸಮಗ್ರ ಪ್ರಶಸ್ತಿ

ಶೇರ್ ಮಾಡಿ

ಉದನೆ: ಸ.ಹಿ ಪ್ರಾಥಮಿಕ ಶಾಲೆ ಹೊಸಮಜಲುಇಲ್ಲಿ ನಡೆದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡು, ಶಾಲೆಗೆ ಪ್ರಥಮ‌ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕನ್ನಡ ಕಂಠಪಾಠ ಕಿರಿಯ ವಿಭಾಗದಲ್ಲಿ -ಅನ್ಷಿ, ಲಘು ಸಂಗೀತ ಕಿರಿಯ- ಮನ್ವಿತ್ ಬಿ .ಜೆ, ಆಶುಭಾಷಣ ಕಿರಿಯ- ಅವನಿ, ಇಂಗ್ಲೀಷ್ ಕಂಠಪಾಠ ಹಿರಿಯ -ರೋಶಿನಿ, ಆಶುಭಾಷಣ ಹಿರಿಯ -ಭವಿಕ್ ಕುಮಾರ್, ಕ್ಲೇ ಮಾಡಲಿಂಗ್ ಹಿರಿಯ -ಧನುಷ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಕಂಠ ಪಾಠ ಇಂಗ್ಲೀಷ್ ಕಿರಿಯ ವಿಭಾಗದಲ್ಲಿ ಪೂರ್ವಿ ಪಿ.ಕೆ, ಧಾರ್ಮಿಕ ಪಠಣ ಅರೇಬಿಕ್ ಕಿರಿಯ – ಅಲ್ಫ ಫಾತಿಮಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಭಕ್ತಿಗೀತೆ ಕಿರಿಯ ವಿಭಾಗದಲ್ಲಿ -ಮನ್ವಿತ್ ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿತಂದಿದ್ದಾರೆ. ಸ್ಪರ್ಧೆಯಲ್ಲಿ ಒಟ್ಟು 13 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಹಾಗೂ ಮುಖ್ಯಗುರುಗಳು, ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದಿಸಿದರು.

Leave a Reply

error: Content is protected !!