ಕಾಂತಮಂಗಲ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ “ಶ್ರೀಮತಿ ಶಾರದಾಬಾಯಿ ನಲಿ-ಕಲಿ ಕೊಠಡಿ” ಹಸ್ತಾಂತರ

ಶೇರ್ ಮಾಡಿ

ಸುಳ್ಯ: ದಿ.ಶ್ರೀಮತಿ ಬಿ.ಕೆ.ಶಾರದಾಬಾಯಿ ನಾವಡ, ನಿವೃತ್ತ ಮುಖ್ಯ ಶಿಕ್ಷಕಿ ಇವರ ಸ್ಮರಣಾರ್ಥವಾಗಿ ಇವರ ಪತಿ ಕೃಷ್ಣ ನಾವಡರವರು ಸುಳ್ಯ ತಾಲೂಕಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲ ಇಲ್ಲಿ ನಿರ್ಮಿಸಿದ “ಶ್ರೀಮತಿ ಶಾರದಾಬಾಯಿ ನಲಿ-ಕಲಿ ಕೊಠಡಿಯ” ಹಸ್ತಾಂತರ ಸಮಾರಂಭ.

ಕಾರ್ಯಕ್ರಮದಲ್ಲಿ ಕುಕ್ಕೇ ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಸಚಿವರಾದ ಎಸ್. ಅಂಗಾರ, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಪಿ.ಸುಬ್ರಹ್ಮಣ್ಯ ಯಡಪಾಡಿತ್ತಾಯ, ಅಜ್ಜಾವರ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ಬಸವನಪಾದೆ, ದ.ಕ. ಕ.ಸ.ಪಾ. ಪೂರ್ವಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಪಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

error: Content is protected !!