ನೆಲ್ಯಾಡಿ: ಯುವಶಕ್ತಿಯು ದಿನದ 24 ಗಂಟೆಯೂ ಸದಾ ಸೇವೆಗಾಗಿ ಸಿದ್ದನಿದ್ದೇನೆ ಎಂಬ ದ್ಯೇಯ ವಾಕ್ಯವನ್ನು ಎತ್ತಿ ಹಿಡಿಯುವ ಚೈತನ್ಯ ಶಕ್ತಿಯಾಗಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಚಿಹ್ನೆ ಯು ಕೊನಾರ್ಕ್ ನ ಸೂರ್ಯ ದೇವಸ್ಥಾನದ ರಥದ ಚಕ್ರವನ್ನು ಆಧಾರವಾಗಿರಿಸಿ ನಿರ್ಮಿಸಲಾಗಿದೆ. ಚಕ್ರ ಎಂಬುದು ಹೇಗೆ ಚಲನಶೀಲವೋ ಅದೇ ರೀತಿ ಯುವ ವಿದ್ಯಾರ್ಥಿಗಳು ಸದಾ ಚಲನಶೀಲವಾಗಿರ ಬೇಕು. ಗಾಂಧೀಜಿಯವರ ಸರ್ವೋದಯದ ಕನಸೇ ರಾಷ್ಟ್ರೀಯ ಸೇವಾ ಯೋಜನೆಯಾಗಿ ರೂಪು ಪಡೆಯಿತು. ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ಈ ಯುವಶಕ್ತಿಗಳಿಂದ ಮಾತ್ರ ನನಸು ಮಾಡಲು ಸಾಧ್ಯ. ಯುವ ವಿದ್ಯಾರ್ಥಿಗಳಲ್ಲಿ ಶಿಸ್ತು,ಸಹಬಾಳ್ವೆ, ರಾಷ್ಟ್ರೀಯ ಭಾವೈಕ್ಯತೆ ಅಲ್ಲದೆ ಇನ್ನು ಅನೇಕ ವ್ಯಕ್ತಿತ್ವದ ವಿಕಸನವನ್ನು ಈ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳುವುದರಿಂದ ಪಡೆಯಲು ಸಾಧ್ಯ ಎಂಬಂತಹ ಚೈತನ್ಯ ಭರಿತ ಮಾತುಗಳನ್ನು ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಎನ್ ಎಸ್ ಎಸ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಉಪನ್ಯಾಸಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿಯಾದ ವಿಶ್ವನಾಥ ಶೆಟ್ಟಿ. ಕೆ., ಇವರು ವಿದ್ಯಾರ್ಥಿಗಳ ಶಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಹ ಸಂಯೋಜಕರಾದ ಡಾ.ಸೀತಾರಾಮ್ ಇವರು ವಹಿಸಿಕೊಂಡು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿನ ತನ್ನ ಅನುಭವವನ್ನು ಹೇಳಿಕೊಂಡರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ವನಿತಾ ಪಿ., ಇವರು ಪ್ರಸ್ತಾವಿಕ ಮಾತುಗಳಾಡಿದರು. ಕಾಲೇಜಿನ ಉಪನ್ಯಾಸಕರು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳ ಪರಿಚಯವನ್ನು ಡೀನಾ ನೆರವೇರಿಸಿದರು. ವಿದ್ಯಾರ್ಥಿಗಳಾದ ಆಫ್ರಿನಾ ಸ್ವಾಗತಿಸಿ. ಪ್ರಸಾದ್ ವಂದಿಸಿದರು. ಪ್ರಥ್ವಿ ಕಾರ್ಯಕ್ರಮ ನಿರೂಪಿಸಿದರು.