ಅರಂತೋಡು: ಶಿಸ್ತು, ನಿರಂತರ ಕಲಿಕೆ, ವ್ಯಕ್ತಿತ್ವ ವಿಕಾಸನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.-ನಿವೃತ್ತ ಪ್ರಾಂಶುಪಾಲ ಕುಸುಮಾಧರ ಕೆ.ವಿ.

ಶೇರ್ ಮಾಡಿ

ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ 14ನೇ ವರ್ಷದ ವಿಶೇಷ ವಾರ್ಷಿಕ ಶಿಬಿರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ನಲ್ಲಿ ಉದ್ಘಾಟನೆ ಗೊಂಡಿತು.

ಕಾವೇರಿ ಕಾಲೇಜು ಗೋಣಿಕೊಪ್ಪದ ನಿವೃತ್ತ ಪ್ರಾಂಶುಪಾಲರಾದ ಕುಸುಮಾಧರ ಕೆ.ವಿ.ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಶಿಸ್ತು, ನಿರಂತರ ಕಲಿಕೆ, ವ್ಯಕ್ತಿತ್ವ ವಿಕಾಸನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅ ನಿಟ್ಟಿನಲ್ಲಿ ಎನ್ಎಸ್ಎಸ್ ಶಿಬಿರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಕೆ ಆರ್ ಗಂಗಾಧರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಪುಷ್ಪಾಧರ ಕೊಡೆಂಕೇರಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಯು ಕೆ, ನಿಕಟ ಪೂರ್ವ ಕಾರ್ಯಕ್ರಮಾಧಿಕಾರಿ ಮೋಹನ್ ಚಂದ್ರ, ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ, ಉಪಾಧ್ಯಕ್ಷರಾದ ಜತ್ತಪ್ಪ ಮಾಸ್ತರ್, ಕಾರ್ಯದರ್ಶಿ ಕೆ.ಆರ್.ಪದ್ಮನಾಭ ನಿರ್ದೇಶಕ ಅಬ್ದುಲ್ಲ, ಅಶ್ರಫ್ ಗುಂಡಿ, ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲರಾದ ರಮೇಶ್ ಎಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಗೌರಿಶಂಕರ ವಂದಿಸಿದರು. ಶ್ರೀಮತಿ ಅಶ್ವಿನಿ ಮತ್ತು ಪದ್ಮ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಕಾರ್ಯಕ್ರಮಾಧಿಕಾರಿ ಲಿಂಗಪ್ಪ, ಸುರೇಶ್ ವಾಗ್ಲೆ, ಶ್ರೀಮತಿ ಶಾಂತಿ, ಶ್ರೀಮತಿ ವಿದ್ಯಾ ಶಾಲಿನಿ, ಶ್ರೀಮತಿ ಭಾಗ್ಯಶ್ರೀ, ಚಿದಾನಂದ ಸಹಕರಿಸಿದರು.

Leave a Reply

error: Content is protected !!