ನೆಲ್ಯಾಡಿ: ಹೊಸಮಜಲು-ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗ(ರಿ) ವತಿಯಿಂದ ಭಗತ್ ಸಿಂಗ್ ಜನ್ಮ ದಿನದ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: ಅಶ್ವತ್ಥ ಗೆಳೆಯರ ಬಳಗ(ರಿ) ಹೊಸಮಜಲು-ಕೌಕ್ರಾಡಿ ನೆಲ್ಯಾಡಿ ಇದರ ವತಿಯಿಂದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜನ್ಮ ದಿನಾಚರಣೆ ಯನ್ನು ಸೆ.28ನೇ ಬುಧವಾರ ಆಚರಿಸಲಾಯಿತು.

ಖ್ಯಾತ ಕಾರ್ಯಕ್ರಮ ನಿರೂಪಕರಾದ ಸುರೇಶ್ ಪಡಿಪಂಡ ರವರು ಭಗತ್ ಸಿಂಗ್ ಆತ್ಮಚರಿತ್ರೆ ಬಗ್ಗೆ ವಿಸ್ತಾರವಾಗಿ ಸೇರಿದ ಜನತೆಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆ ಯನ್ನು ಗೆಳೆಯರ ಬಳಗದ ಹಿರಿಯ ಸದಸ್ಯರಾದ ಸುಂದರ ಬಾಣಜಾಲು ವಹಿಸಿದ್ದರು. ಧನ್ಯವಾದ ಸಮರ್ಪಣೆ ಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ವಂದನ್ ರವರು ನೀಡಿದರು. ಕಾರ್ಯಕ್ರಮ ವನ್ನು ಸದಸ್ಯರಾದ ಲೋಕೇಶ್ ಬಾಣಜಾಲು ನೆರವೇರಿಸಿದರು. ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯದ ಹಿಂದೂ ಜಾಗರಣ ವೇದಿಕೆ, ಶಾಸ್ತರೇಶ್ವರ ಗೆಳೆಯರ ಬಳಗ ಹಾರ್ಪಳ, ಸ್ವಾಮಿ ಕೊರಗಜ್ಜ ಕೊಕ್ಕಡ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

Leave a Reply

error: Content is protected !!