ಅರಂತೋಡು: ಅರಂತೋಡು ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಶೇರ್ ಮಾಡಿ

ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಅರಂತೋಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮ ರಾಷ್ಟ್ರ ನಾಯಕರಾದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಯ ಜಯಂತಿ ಅಂಗವಾಗಿ ಫೋಟೋಗಳಿಗೆ ಪುಷ್ಪಾರ್ಚನೆಯೊಂದಿಗೆ ಪ್ರಾರಂಭಗೊಂಡಿತು. ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ ಮಾತನಾಡಿ, ರಾಷ್ಟ್ರ ನಾಯಕರುಗಳಾದ ಗಾಂಧಿ ಮತ್ತು ಶಾಸ್ತ್ರೀ ಸೇರಿದಂತೆ ಹಲವು ಪ್ರಮುಖರ ದೂರ ದೃಷ್ಟಿಯ ಆಲೋಚನೆಯಿಂದ ಬಲಿಷ್ಠ ಭಾರತ ನಿರ್ಮಾಣಗೊಳ್ಳುತ್ತಿದೆ.ಇದಕ್ಕೆ ಎನ್ ಎಸ್ ಎಸ್ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ಶಿಬಿರ ಶಿಬಿರಾರ್ಥಿಗಳಿಗೆ ವಿವಿಧ ತರಬೇತಿ, ಅನುಭವಗಳನ್ನು ಕಲ್ಪಿಸುತ್ತಿದೆ.ಇವು ಭವಿಷ್ಯದ ಬದುಕಿಗೆ ದಾರಿದೀಪ ಎಂದರು.ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಗಾಂಧಿ ಕಂಡ ಭವ್ಯ ಭಾರತದ ಕನಸು ಯುವಜನತೆಯಲ್ಲಿ ಅಡಗಿದೆ.ಅಂತಹ ಯುವಜನತೆಗೆ ದೇಶ ಪ್ರೇಮ ಮತ್ತು ತಮ್ಮ ಬದುಕಿನ ಜವಾಬ್ದಾರಿಗಳನ್ನು ತಿಳಿಸಿ ಕೊಡುವ ಯೋಜನೆ ಎನ್ಎಸ್ಎಸ್ ಶಿಬಿರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಮಾರಿ ಶ್ವೇತಾ, ಸದಸ್ಯರಾದ ಪುಪ್ಪಾಧರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸತೀಶ್ ನಾಯ್ಕ, ವಾಹನ ಮಾಲಕ ಚಾಲಕರ ಸಂಘ ಅಧ್ಯಕ್ಷ ಜನಾರ್ಧನ ಇರ್ಣೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್, ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬನ, ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ನಿರ್ದೇಶಕ ಅಬ್ದುಲ್ಲ, ಕೃಷ್ಣಪ್ಪ, ಶ್ರೀಜೀದ್, ಶ್ರೀಜೀತ್, ನವೀನ್, ಶಿಕ್ಷಕಿಯರಾದ ಶ್ರೀಮತಿ ಸ್ವರಸ್ವತಿ, ಶ್ರೀಮತಿ ಭಾನುಮತಿ, ಘಟಕದ ನಾಯಕ ನಿಶಾಂತ್, ನಾಯಕಿ ಕುಮಾರಿ ಮೋಕ್ಷಾ ಉಪಸ್ಥಿತರಿದ್ದರು.

ಶಿಬಿರದ ಅತ್ಯುತ್ತಮ ಶಿಬಿರಾರ್ಥಿಗಳಿಗೆ ಕೊಡಮಾಡುವ ಪುರಸ್ಕಾರಕ್ಕೆ ಕುಮಾರಿ ಮೂವಿತ ಮತ್ತು ಕೀರ್ತನ್ ಭಾಜನರಾದರು. ಶಿಬಿರದ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಬಿಂದು ಮತ್ತು ಯೋಗ ಶಿಕ್ಷಣ ನೀಡಿದ ವಿಶ್ವನಾಥ ಬಂಗಾರಕೊಡಿ ಕಿರುಕಾಣಿಕೆ ನೀಡಲಾಯಿತು.

ಶಿಬಿರದಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಶಿಬಿರಾಧಿಕಾರಿ ಗೌರಿಶಂಕರ ಶಿಬಿರಕ್ಕೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದರು. ನಿಕಟಪೂರ್ವಾ ಕಾರ್ಯಕ್ರಮಾಧಿಕಾರಿ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!